ಜಿಲ್ಲೆ

ಆರೋಗ್ಯ ತಪಾಸಣಾ ಶಿಬಿರ ನಾಳೆಯಿಂದ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಹೃದಯ ದಿನ ನಿಮಿತ್ತ ನಗರದ ಯುನಿಟಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್​ ಧಾರವಾಡ ಮಿಡ್​ ಟೌನ್​ ಸಹಯೋಗದಲ್ಲಿ ನಗರದಲ್ಲಿ ಸೆ. 23ರಿಂದ ಅ.5 ವರೆಗೆ ಹೃದಯ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಬಿಪಿ, ಶುಗರ್​, ಇಸಿಜಿ, 2ಡಿ ಇಕೋ, ಟಿಎಂಟಿ ಪರೀಕ್ಷೆಗಳನ್ನು ನಡೆಸಲಾಗುವುದು. ಅಲ್ಲದೇ ಹಿರಿಯ ಹೃದಯ ರೋಗ ತಜ್ಞ ಡಾ. ಚೌಡಪ್ಪ ಶಾಖಾಪುರ ಸಲಹೆ ನೀಡುವರು. ಶೇ.50 ರಿಯಾಯಿತಿ ದರದಲ್ಲಿ ಎಂಜಿಯೋಗ್ರಾಫಿ ಪರೀಕ್ಷೆ ನಡೆಸಲಾಗುವುದು. ಸಾರ್ವಜನಿಕರು ಶಿಬಿರದ ಪ್ರಯೋಜನೆ ಪಡೆಯಬೇಕು ಎಂದು ಸಂಯೋಜಕ ಡಾ. ಪ್ರಕಾಶ ರಾಮನಗೌಡರ ತಿಳಿಸಿದ್ದಾರೆ.