ವಿಜಯಪುರ: ಆರಕ್ಷಕರಿಗಾಗಿ ನಮ್ಮದೊಂದು ಅಳಿಲು ಸೇವೆ ಇರಲಿ ಎಂದು ಬಸವನ ಬಾಗೇವಾಡಿಯ ಡಾ. ಅಮರೇಶ ಮಿಣಜಗಿ ಅವರ ನೇತ್ರತ್ವದಲ್ಲಿ, ಶ್ರೀ ಅಮರೇಶ್ವರ ಕ್ಲಿನಿಕ್ ನಿಂದ ಕಳೆದ ಮೂರು ವರ್ಷಗಳಿಂದ ಆರಕ್ಷಕರ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದೆ. ವಿಜಯಪುರ ಜಿಲ್ಲೆಯಾದ್ಯಂತ ತಿಂಗಳಿಗೊಂದು ಪೊಲೀಸ್ ಠಾಣೆಗೆ ತೆರಳುವ ಈ ವೈದ್ಯರ ತಂಡ ಅಲ್ಲಿನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಉಚಿತ ಔಷಧಿಗಳ ವಿತರಣಾ ಶಿಬಿರ ನಡೆಸುತ್ತಿದೆ.
ಸದಾ ಒತ್ತಡದಲ್ಲಿರುವ ಆರಕ್ಷಕರ ಆರೋಗ್ಯಕ್ಕಾಗಿ ತಮ್ಮದೂ ಒಂದು ಅಳಿಲು ಸೇವೆ ಇರಲಿ ಎಂದು ಯೋಚಿಸಿದ ಡಾ. ಅಮರೇಶ ಮಿಣಜಗಿ, ಡಾ. ಗುರುರಾಜ ಕುಲಕರ್ಣಿ ಸೇರಿದಂತೆ ಇತರೇ ವೈದ್ಯರು ಸೇರಿ ಕಳೆದ ಮೂರು ವರ್ಷಗಳಿಂದ ಸೇವೆ ನಡೆಸುತ್ತಿದ್ದಾರೆ. ಬಿಪಿ ತಪಾಸಣೆ, ಶುಗರ್ ತಪಾಸಣೆ, ಕಣ್ಣಿನ ದೃಷ್ಠಿ ತಪಾಸಣೆ, ಹೃದಯ ಸಂಭಂಧಿ ಕಾಯಿಲೆಗಳ ತಪಾಸಣೆ, ಮಾನಸಿಕ ಒತ್ತಡದ ಕಾಯಿಲೆಗಳು ಸೇರಿದಂತೆ ಇತರೇ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಿ, ಔಷಧಿಗಳ ವಿತರಣಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಡಾ.ಅಮರೇಶ ಮಿಣಜಿಗಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ವಿಜಯಪುರದ ಕೇಂದ್ರ ಕಾರಾಗೃಹಕ್ಕೆ ಆಗಮಿಸಿ ಇಲ್ಲಿರುವ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿ ಅವರಿಗೆ ಉಚಿತವಾಗಿ ಔಷಧಿಗಳ ವಿತರಣೆ ನಡೆಸಿದ್ರು. ಒಂದಲ್ಲ ಒಂದು ಒತ್ತಡದಲ್ಲಿ ಕೆಲಸ ಮಾಡುವ ಆರಕ್ಷಕರು ಇರುವ ಸ್ಥಳಕ್ಕೆ ವೈದ್ಯರು ಹಾಗೂ ಪ್ರಯೋಗಾಲಯ ತಜ್ಞರು ಆಗಮಿಸಿ ಆರೋಗ್ಯ ತಪಾಸಣೆ ನಡೆಸುವುದು ಆರಕ್ಷಕರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ ಎಂದು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಹ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೆ ವೇಳೆ ಮಾತನಾಡಿದ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ. ಐ ಜಿ ಮ್ಯಾಗೇರಿ ಅವರು ಮೇಲ್ನೋಟಕ್ಕೆ ನೋಡಲು ಆರೋಗ್ಯವಾಗಿ ಕಂಡರು ಸಹ ಅದೆಷ್ಟೋ ಜನ್ರಿಗೆ ದೃಷ್ಠಿ ದೋಷ, ಹೃದಯ ಸಂಭಂಧಿ ಸೇರಿದಂತೆ ಹಲವು ಸಮಸ್ಯೆಗಳು ಇರೋದು ಗೊತ್ತೇ ಆಗಿರೋದಿಲ್ಲ. ಆದ್ರೆ ಕಾಲಕಾಲಕ್ಕೆ ಆಗಮಿಸಿ ಈ ವೈದ್ಯರ ತಂಡ ತಪಾಸಣೆ ನಡೆಸಿ ಆರಕ್ಷಕರಿಗೆ ಸ್ಥಳದಲ್ಲೇ ಔಷಧಿಗಳನ್ನೂ ಕೊಡುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.