ಬಾದಾಮಿ ಮೇಣಬಸದಿ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ  
ಜಿಲ್ಲೆ

ಆಯುಷ್ಯ ಪದ್ದತಿ ಅರಿವು ಅಗತ್ಯ

ಬಾಗಲಕೋಟೆ: ಆಯುರ್ವೇದ ಪದ್ಧತಿಗೆ ಪ್ರಾಮುಖ್ಯತೆ ನೀಡುವ ಮೂಲಕ ಜನರಲ್ಲಿ ಆಯುಷ್ಯ ಪದ್ದತಿಯ ಅರಿವುಗಳನ್ನು ಮೂಡಿಸುವುದು ಅಗತ್ಯವಾಗಿದೆ ಎಂದು ಬಾದಾಮಿ ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ್ ಹೇಳಿದರು.


ಬಾದಾಮಿ ಮೇಣಬಸದಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ಯ ಇಲಾಖೆ, ವೀರ ಪುಲಕೇಶಿ ವೈದ್ಯಕೀಯ ಮಹಾವಿದ್ಯಾಲಯ, ಕಾಳಿದಾಸ ವೈದ್ಯಕೀಯ ಮಹಾವಿದ್ಯಾಲಯ, ಭಾರತೀಯ ಪುರಾತತ್ವ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಆಯುರ್ವೇದ ಔಷಧಿಗಳಲ್ಲಿ ಯಾವುದೇ ಕೆಟ್ಟ ಪರಿಣಾಮಗಳಿಲ್ಲ. ಮನೆಗಳಲ್ಲಿ ಅನೇಕ ಔಷಧಗಳು ದೊರೆಯುತ್ತವೆ. ಅವುಗಳ ಬಳಕೆ ಬಗ್ಗೆ ನಾವೆಲ್ಲ ತಿಳಿದುಕೊಳ್ಳಬೇಕು ಎಂದರು.


ಬಾದಾಮಿ ತಾಲೂಕಾ ವೈದ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ ಮಾತನಾಡಿ, ಆಯುವೇಧ ಔಷಧಿಯಲ್ಲಿ ತುಂಬಾ ಶಕ್ತಿ ಇದ್ದು, ರೋಗವನ್ನು ನಿರ್ಮೂಲನೆ ಮಾಡುತ್ತದೆ ಎಂದರು.


ಕಾಳಿದಾಸ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಮಚಂದ್ರ ನೇಸರಗಿ, ವೀರಪುಲಕೇಶಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಡಾ.ಭಾಗವತ್, ಡಾ.ಸಂಗೀತಾ ಬಳಗಾನೂರ ಮಾತನಾಡಿದರು. ಪ್ರಭಾರ ಜಿಲ್ಲಾ ಆಯುಷ್ಯ ಅಧಿಕಾರಿ ಡಾ.ಅಕ್ಕಮಹಾದೇವಿ ಗಾಣಿಗೇರ, ಭಾರತೀಯ ಪುರಾತತ್ವ ಇಲಾಖೆಯ ಸುನೀಲ್‌ಕುಮಾರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಆರ್.ಎಸ್.ಆದಾಪೂರ, ವೈದ್ಯರಾದ ಡಾ.ಬಸವರಾಜ ಗಂಗಲ ಸೇರಿದಂತೆ ಇತರರು ಉಪಸ್ಥಿತರಿದ್ದರು. ಡಾ.ಚಂದ್ರಕಾಂತ ರಕ್ಕಸಗಿ ವಂದಿಸಿದರು.