ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ರೋಟರಿ ಕ್ಲಬ್‌ನಿಂದ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಡಾ. ಜ್ಞಾನೇಶ್ ಉದ್ಘಾಟಿಸಿದರು. ಡಾ.ಮಹೇಶ್, ಡಾ.ನದಾಫ್, ಮಹಾಂತೇಶ್, ಕೃಷ್ಣಪ್ಪ ಓಟೂರು ಇತರರಿದ್ದರು. 
ಜಿಲ್ಲೆ

ಆಯುರ್ವೇದ ಚಿಕಿತ್ಸೆಗೆ ವಿಶೇಷ ಮಹತ್ವ

ಸೊರಬ: ಋಷಿಮುನಿಗಳ ಕಾಲದಿಂದಲೂ ಆಯುರ್ವೇದ ಚಿಕಿತ್ಸೆಗೆ ವಿಶೇಷ ಮಹತ್ವವಿದೆ. ಮನುಷ್ಯನ ಆರೋಗ್ಯದ ಜತೆಗೆ ಪ್ರಕೃತಿಯನ್ನು ಕೂಡ ಸುಸ್ಥಿರವಾಗಿಡುವಂತಹ ಶಕ್ತಿ ಆಯುರ್ವೇದ ಚಿಕಿತ್ಸೆಗಿದೆ ಎಂದು ಸಮಾಜ ಸೇವಕ ಡಾ.ಜ್ಞಾನೇಶ್ ಹೇಳಿದರು.

ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ರೋಟರಿ ಕ್ಲಬ್‌ನಿಂದ ಆಯೋಜಿಸಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ, ಆರೋಗ್ಯ ಶಿಬಿರ ಹಾಗೂ ಪಾಲಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಗಿಡಮೂಲಿಕೆ ಔಷಧಗಳಲ್ಲಿ ತನ್ನ ಅಂತಸತ್ವ ಅಡಗಿಸಿಕೊಂಡಿರುವ ಆಯುರ್ವೇದ ಚಿಕಿತ್ಸೆ ಮಹತ್ವ ಅರಿತು ಆಯುರ್ವೇದವನ್ನು ಪ್ರಕೃತಿಗಾಗಿ ಮತ್ತು ಭೂಮಿಗಾಗಿ ಎನ್ನುವ ಘೋಷಣೆ ಅರ್ಥಪೂರ್ಣವಾಗಿದೆ. ಮನುಷ್ಯನಿಗೆ ಮಾತ್ರ ಪ್ರಕೃತಿಯನ್ನು ಕೂಡ ಆರೋಗ್ಯವನ್ನಾಗಿಸುವ ಶಕ್ತಿ ಇದೆ ಎಂದು ತಿಳಿಸಿದರು.

ಉದ್ರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಕಾರಿ ಡಾ.ಮಹೇಶ್, ಗುಡವಿ ಆಸ್ಪತ್ರೆ ವೈದ್ಯಾಕಾರಿ ಡಾ.ನದಾಫ್, ರೋಟರಿ ಕ್ಲಬ್ ಅಧ್ಯಕ್ಷ ಮಹಾಂತೇಶ್, ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಕಾರ್ಯದರ್ಶಿ ರಾಮಪ್ಪ ಚೌಡಿಕೊಪ್ಪ, ಶಿಕ್ಷಕರಾದ ರವೀಂದ್ರ, ಪುಟ್ಟರಾಜ, ಗಾಯತ್ರಿ ನಾಯಕ್, ಮಂಗಳಾ ಎಸ್.ಪೂಜಾರ್, ಸುವರ್ಣಾ ಎಚ್.ಪಲ್ಲವಿ, ಪಾಲಕರಾದ ಸವಿತಾ ಬಸವರಾಜ್ ಇತರರಿದ್ದರು.