ಬಾಗಲಕೋಟೆ : ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯನಲ್ಲಿ ಕಂಡುಬರುತ್ತಿರುವ ಹಲವು ಅನಾರೋಗ್ಯ ಸಮಸ್ಯೆಗಳಿಗೆ ಆಯುರ್ವೇದವು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಆರ್ ಜಿಯುಎಚ್ಎಸ್ ನ ಉಪನಿರ್ದೇಶಕರಾದ ಡಾ. ರಾಜಶ್ರೀ ಆರ್ ತಿಳಿಸಿದರು.
ನಗರದ ಎಂ ಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ 2023-24ನೇ ಸಾಲಿನ ಬಿಎಎಂಎಸ್ ವಿದ್ಯಾರ್ಥಿಗಳ 12 ದಿನಗಳ ಕಾಲದ 'ಆಯುರ್ವ್ಯಾಸ-2023'ರ ಹೆಸರಿನ ಪರಿವರ್ತನಾ ಪಠ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಅವರು ಮಾತನಾಡುತ್ತಾ ಪ್ರತಿಯೊಬ್ಬರು ತಮ್ಮ ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದವನ್ನು ಅರಿತುಕೊಂಡರೆ ಅಮೃತ ಬದುಕನ್ನು ಪಡೆದುಕೊಳ್ಳಬಹುದೆಂದರು.
ಇನ್ನೋರ್ವ ಕಾರ್ಯಕ್ರಮದ ಗೌರವ ಅತಿಥಿಗಳಾದ ಆರ್ ಜಿ ಯು ಎಚ್ ಎಸ್ ನ ಸೆನೆಟ್ ಮೆಂಬರ್ ಆದ ಡಾ. ಜಯತೀರ್ಥ ಆರ್ ಜೋಶಿ ಅವರು ಮಾತನಾಡುತ್ತಾ ನಾವು ಕಲಿಯುತ್ತಿರುವ ವಿಷಯಗಳಲ್ಲಿ ಆಯುರ್ವೇದವು ಸೇರಿಕೊಂಡಿರುವುದನ್ನು ಅರಿತುಕೊಂಡು ಉತ್ತಮ ಆಯುರ್ವೇದಿಕ್ ವೈದ್ಯರಾಗಬೇಕೆಂದು ಸಲಹೆ ನೀಡಿದರು.
12 ದಿನಗಳ ಕಾಲ ನಡೆದ ಈ ಕಾರ್ಯಗಾರದಲ್ಲಿ ರಾಜ್ಯದ ನುರಿತ ವೈದ್ಯಕೀಯ ಪ್ರಾಧ್ಯಾಪಕ ವರ್ಗ ಪಾಲ್ಗೊಂಡಿದ್ದು ಸಾಧ್ಯವಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ಆದ ಡಾ. ಶಿವಕುಮಾರ್ ಗಂಗಾಲ, ಪ್ರಾಂಶುಪಾಲರಾದ ಡಾ. ಪ್ರಲ್ಹಾದ ಗಂಗಾವತಿ, ಡಾ. ವಿಜಯಕುಮಾರ್ ಚವಡಿ, ಡಾ.ಈಶ್ವರ್ ಪಾಟೀಲ್, ಡಾ. ದೀಪಾ ಗಂಗಾಲ, ಡಾ.ವೀಣಾ ಕುಲಕರ್ಣಿ, ಡಾ. ರಜನಿ ದಡೆದ, ಡಾ. ರೇಖಾ ಸಕ್ಕರಿ,ಡಾ. ಅತಿರಾ ಸೋಮನ್, ಸ್ವರ್ಣ ಮಂದಾರ ಸರ್, ಜೊತೆಗೆ ಕಾಲೇಜಿನ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.