ಜಿಲ್ಲೆ

ಆಯುರ್ವೆದ ಔಷಧ ಮಾರುಕಟ್ಟೆಗೆ ಬಿಡಲು ಆಗ್ರಹ

Dharwad

ಹುಬ್ಬಳ್ಳಿ: ಆಯುರ್ವೆದ ಪದ್ಧತಿಯಲ್ಲಿ ಡಾ. ಗಿರಿಧರ ಕಜೆ ಅವರು ಸಂಶೋಧಿಸಿರುವ ಔಷಧವನ್ನು ಕರೊನಾ ರೋಗಿಗಳಿಗೆ ಕೊಡಬೇಕು ಹಾಗೂ ಮಾರುಕಟ್ಟೆಯಲ್ಲಿ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಡಾ. ಕಜೆ ಅವರ ಆಯುರ್ವೆದ ಔಷಧದಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ರೋಗಿಗಳು ಗುಣ ಹೊಂದುತ್ತಿದ್ದಾರೆ. ಹೀಗಿದ್ದರೂ ಸರ್ಕಾರ ವಿಳಂಬ ಧೋರಣೆ ತೋರುತ್ತಿದೆ. ಅಲೋಪಥಿ ಔಷಧಗಳ ಲಾಬಿಗೆ ಆಳುವವರು ಮಣಿದಿರುವ ಅನುಮಾನ ಮೂಡಿಸಿದೆ ಎಂದು ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.

ಅಪರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ರವಾನಿಸಲಾಯಿತು.

ಶ್ರೀರಾಮ ಸೇನೆಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಉಪಾಧ್ಯಕ್ಷ ಡಾ. ಈಶ್ವರಗೌಡ ಪಾಟೀಲ, ಮಹಾಲಿಂಗ ಐಗಳಿ, ಮಂಜು ಕಾಟ್ಕರ್, ಮತ್ತಿತರರು ಇದ್ದರು.

ಅಯೋಧ್ಯೆಗೆ ಅಂಜನಾದ್ರಿ ಶಿಲೆ: ಅಯೋಧ್ಯೆಯ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ, ಹನುಮಂತನ ಜನ್ಮಸ್ಥಳವಾಗಿರುವ ರಾಜ್ಯದ ಅಂಜನಾದ್ರಿ ಪರ್ವತದಿಂದ ಆಯ್ದ ಶಿಲೆಯೊಂದಕ್ಕೆ ಬೆಳ್ಳಿ ಕವಚ ಅಳವಡಿಸಿ ಪೂಜಿಸಿ ಶ್ರೀರಾಮ ಸೇನೆ ವತಿಯಿಂದ ಕಳುಹಿಸಲಾಗುತ್ತಿದೆ ಎಂದು ಪ್ರಮೋದ ಮುತಾಲಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.