ಹುಣಸೂರು ತಾಲೂಕು ಆಯಿರಹಳ್ಳಿಯಲ್ಲಿ ಪಂಚದೇವರ ಉತ್ಸವ ವಿಜೃಂಭಣೆಯಿಂದ ನೆರವೇರಿತು. 
ಜಿಲ್ಲೆ

ಆಯಿರಹಳ್ಳಿಯಲ್ಲಿ ಪಂಚದೇವರ ಉತ್ಸವ


ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ಆಯಿರಹಳ್ಳಿಯಲ್ಲಿ ಪಂಚದೇವರ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಕಡೇ ಕಾರ್ತಿಕ ಸೋಮವಾರದ ಮಾರನೆಯ ದಿನ ಗ್ರಾಮದ ಮಹದೇಶ್ವರಸ್ವಾಮಿ, ಬಸವೇಶ್ವರಸ್ವಾಮಿ, ಕನ್ನಂಬಾಡಿ ಅಮ್ಮ, ಅಯ್ಯಪ್ಪಸ್ವಾಮಿ ಮತ್ತು ಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳ ಉತ್ಸವವು ಮಂಗಳವಾರ ರಾತ್ರಿ ಜರುಗಿತು. ಸಂಜೆ ಊರಿನ ಪ್ರಮುಖ ಸ್ಥಳದಿಂದ ಹೊರಟ ಮೆರವಣಿಗೆ ರಾತ್ರಿಯಿಡೀ ಊರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

ಮನೆ ಬಾಗಿಲಿಗೆ ಬಂದ ದೇವರನ್ನು ಕಂಡು ಧನ್ಯತಾ ಭಾವ ಅನುಭವಿಸಿದ ಗ್ರಾಮಸ್ಥರು ಹೂವು ಹಣ್ಣುಕಾಯಿ ನೀಡಿ ಪೂಜಾ ಕೈಂಕರ್ಯ ನೆರವೇರಿಸಿದರು. ಉತ್ಸವದ ಅಂಗವಾಗಿ ಇಡೀ ಊರನ್ನು ತಳಿರುತೋರಣ, ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ಉತ್ಸವದ ಅಂಗವಾಗಿ ಬೆಳಗಿನಿಂದ ವಿಶೇಷ ಪೂಜಾಕಾರ್ಯಗಳನ್ನು ಕೈಗೊಂಡು ಪ್ರಸಾದ ವಿನಿಯೋಗಿಸಲಾಯಿತು.