Do not let children ride a motorcycle before enough age. because of our negligence would result in losing baby forever.
ಆಯತಪ್ಪಿ ಬಿದ್ದು ದ್ವಿಚಕ್ರ ಸವಾರ ಸಾವು
ಬೆಳಗಾವಿ: ದ್ವಿಚಕ್ರ ವಾಹನ ಸವಾರ ರಸ್ತೆಯಲ್ಲಿ ಆಯತಪ್ಪಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸುವ ದಾರಿಯ ಮಧ್ಯದಲ್ಲಿ ಮೃತನಾದ ಘಟನೆ ಕಣಬರ್ಗಿ ರಸ್ತೆಯಲ್ಲಿನ ರುಕ್ಮೀಣಿ ನಗರದ ಬಳಿ ಭಾನುವಾರ ನಡೆದಿದೆ.
ರಾಮತೀರ್ಥ ನಗರ ನಿವಾಸಿ ಮೈನುದ್ದಿನ ಮಹ್ಮದಹಾಶಮ ಸೌದಾಗರ (೫೨) ಮೃತ ವ್ಯಕ್ತಿ. ಈತ ನಗರದಿಂದ ಕಣಬರ್ಗಿ ರಸ್ತೆಯ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ರುಕ್ಮೀಣಿ ನಗರದ ಬಳಿ ಆಯತಪ್ಪಿ ದ್ವಿಚಕ್ರ ವಾಹನದ ಮೇಲಿಂದ ಬಿದ್ದು ಗಾಯಗೊಂಡಿದ್ದಾನೆ. ಸ್ಥಳಿಯ ಸಹಕಾರದಿಂದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ರವಾಣಿಸುವ ಮಧ್ಯದಲ್ಲಿಯೆ ನಿಧನನಾಗಿದ್ದಾನೆ. ಈ ಕುರಿತು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.