ವಿಜಯಪುರ : ಬೈಕ್ ಸವಾರ ಆಯತಪ್ಪಿ ಪಕ್ಕದಲ್ಲಿರುವ ಹಳ್ಳಕ್ಕೆ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ನಾಲತವಾಡ ಪಟ್ಟಣದ ಬಲದೀನಿ ಬಳಿ ಬುಧವಾರ ನಡೆದ ನಡೆದಿದೆ. ಲಿಂಗಸೂರು ತಾಲೂಕಿನ ನಾಗಲಾಪುರ ನಿವಾಸಿ ರಮೇಶ ವಡ್ಡರ್ ಮೃತ ಬೈಕ್ ಸವಾರ. ನಾಲತವಾಡ ಮಾರ್ಗವಾಗಿ ಬಲದೀನಿ ಹೋಗುವಾಗ ದುರ್ಘಟನೆ ಸಂಭವಿಸಿದೆ. ಮುದ್ದೇಬಿಹಾಳ ಪಿಎಸ್‌ಐ ಮಲ್ಲಪ್ಪ ಮಡ್ಡಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.