ಜಿಲ್ಲೆ

ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಪೊರಕೆ ಅಭಿಯಾನ

ಅರಕಲಗೂಡು: ಪಟ್ಟಣದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಶನಿವಾರ ಪೊರಕೆ ಅಭಿಯಾನ ನಡೆಸಿದರು.


ತಾಲೂಕು ಕಚೇರಿ, ಸಾರ್ವಜನಿಕ ಆಸ್ಪತ್ರೆ, ಅನಕೃ ವೃತ್ತ ಸೇರಿದಂತೆ ವಿವಿಧೆಡೆ ಪೊರಕೆಯಿಂದ ಗುಡಿಸಿ ಪೊರಕೆಯೇ ಪರಿಹಾರ ಎಂದು ಘೋಷಣೆಗಳನ್ನು ಕೂಗಿದರು. ಮುಖಂಡ ಜವರೇಗೌಡ ಮಾತನಾಡಿ, ಎಎಪಿ ಪಕ್ಷವು ದೆಹಲಿ ಪಂಜಾಬ್ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದು ಉತ್ತಮ ಆಡಳಿತ ನಡೆಸುತ್ತಿದೆ. ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೊಗೆದು ಜನಪರ ಆಡಳಿತ ನೀಡುವುದೇ ಪಕ್ಷದ ಗುರಿಯಾಗಿದೆ. ನನ್ನನ್ನು ಅರಕಲಗೂಡು ವಿಧಾನ ಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಿ ನಿಯೋಜಿಸಿದ್ದು ಮತದಾರರು ಬೆಂಬಲಿಸುವಂತೆ ಮನವಿ ಮಾಡಿದರು.


ಪಟ್ಟಣದ ಪ್ರಮೂಖ ಬೀದಿಗಳಲ್ಲಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು.