ಜಿಲ್ಲೆ

ಆಭರಣಗಳ ಪ್ರದರ್ಶನ, ಮಾರಾಟ ಮೇಳ

ಮೈಸೂರು; ನಗರದ ಹೋಟೆಲ್ ರಿಯೋ ಮೆರಡಿಯನ್‌ನಲ್ಲಿ ಆಯೋಜಿಸಿರುವ ಎರಡು ದಿನಗಳ ಇಂಡಿಯನ್ ಲೈಫ್‌ಸ್ಟೈಲ್ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶನಿವಾರ ಚಾಲನೆ ದೊರೆಯಿತು.+


ಸಿನಿಮಾ ನಟಿ ಯಶಸ್ವಿನಿ ರವೀಂದ್ರನ್ ಮೇಳವನ್ನು ಉದ್ಘಾಟಿಸಿದರು. ಕೋಕೋ ಲಕ್ಷುರಿ ಇಂಟರ್‌ನ್ಯಾಷನಲ್ ಸಂಸ್ಥೆಯ ಮಾಲೀಕರಾದ ಮಂಜು, ಶಿಲ್ಪಾ ಶಾಸ್ತ್ರ ಸ್ಟುಡಿಯೋ ಸಂಸ್ಥೆಯ ಅರುಂಧತಿ, ಉದ್ದಿಮೆದಾರರಾದ ಅನಿತಾ, ಚಂದ್ರ, ಸಖಿ ಇನ್ನಿತರರಿದ್ದರು. ದೇಶದ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಭಾಗವಹಿಸಿವೆ.


ಹಬ್ಬಗಳ ಕೊಡುಗೆಯಾಗಿ ಮೈಸೂರಿನ ಜನರಿಗೆ ಫ್ಯಾಷನ್ ಉತ್ಪನ್ನಗಳು ಒಂದೇ ಸೂರಿನಡಿ ಕಲ್ಪಿಸಿಕೊಡಲು ಈ ಮೇಳ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10.30ರಿಂದ ರಾತ್ರಿ 8.30ರವರೆಗೆ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಇದೆ.


ಮೈಸೂರು ಮತ್ತು ಸುತ್ತಮುತ್ತ ಭಾಗದ ಜನರು ಕೆಲ ದಿನಗಳಲ್ಲಿ ಶ್ರಾವಣ ಮಾಸದೊಂದಿಗೆ ಬರುವ ವರಮಹಾಲಕ್ಷ್ಮೀ ಹಬ್ಬ, ಗೌರಿ- ಗಣೇಶ ಹಬ್ಬ ಸಹಿತ ಮುಂತಾದ ಹಬ್ಬಗಳನ್ನು ಸ್ಮರಣೀಯವಾಗಿಸಿಕೊಳ್ಳಲು ಸಜ್ಜಾಗಿದ್ದಾರೆ. ಇದಕ್ಕೆ ಪೂರಕವಾಗಿ ಆಕರ್ಷಕ, ಮನಸೂರೆಗೊಳ್ಳುವ ವೈವಿಧ್ಯಮಯ, ವಿವಿಧ ನವೀನಶೈಲಿ, ವಿನ್ಯಾಸದ ಆಭರಣಗಳ ಪ್ರದರ್ಶನ ಆಯೋಜಿಸಲಾಗಿದ್ದು, ಇಲ್ಲಿ ಅಗತ್ಯ ಉತ್ಪನ್ನಗಳು ದೊರೆಯಲಿವೆ.
ಜೀವನಶೈಲಿ, ಫ್ಯಾಷನ್‌ಗೆ ಪೂರಕವಾಗಿ ಹೊಸತನದ ವಿನ್ಯಾಸದ ಅದ್ಭುತವಾದ ವಂಡರ್ ಡೈಮಂಡ್ಸ್, ಕೋಕೋ ಲಕ್ಷುರಿ ಇಂಟರ್‌ನ್ಯಾಷನಲ್, ಸಿಕ್ಸ್ ಯಾರ್ಡ್ ಸಿಲ್ಕ್, ಸಖಿ ಫ್ಯಾಷನ್ಸ್, ರಾಹುಲ್ಸ್, ದಯಾಲ್ ಸಾಂಪ್ರದಾಯಿಕ ಸಿಲ್ಕ್, ಬೇಗಂಸ್ ಚಿಂಕಾರಿ, ನವಜಿ ಎಂಟರ್‌ಪ್ರೈಸಸ್, ಮಹಿ ಕಲೆಕ್ಷನ್ಸ್, ಹೋಮ್ ಕಂರ್ಟ್ಸ್, ಆದಾ ಕಲೆಕ್ಷನ್ ಹೀಗೆ ಹಲವು ವಿಧದ ವಿಶೇಷ ಸಂಗ್ರಹದ ಲೋಕವೇ ಇಲ್ಲಿದೆ.


ವಜ್ರಾಭರಣಗಳು, ಬೆಳ್ಳಿ ಆಭರಣಗಳು, ಕಾಂಚೀವರಂ ಸೀರೆಗಳು, ಹೊಸ ವಿನ್ಯಾಸದ ರೇಷ್ಮೆ ಸೀರೆಗಳು, ವಧು-ವರರಿಗೆ ಅಗತ್ಯವಿರುವ ವಿವಾಹ ವಸಗಳು, ಕುರ್ತಾಗಳು, ಟಾಪ್ಸ್, ಫ್ಯಾಷನ್ ಜ್ಯುವೆಲ್ಲರಿ, ಹ್ಯಾಂಡ್‌ಕ್ರ್‌ಟಾ ಜ್ಯುವೆಲ್ಲರಿ, ವಿವಿಧ ಮಾದರಿಯ ಜವಳಿ ಉತ್ಪನ್ನಗಳು, ಗೃಹೋಪಯೋಗಿ, ಅಲಂಕಾರಿಕ ವಸ್ತುಗಳು, ಹ್ಯಾಂಡ್‌ಕ್ರ್‌ಟಾ ಬ್ಯಾಗ್ಸ್… ಹೀಗೆ ಪ್ರತಿಯೊಂದು ವಸ್ತುಗಳು ಒಂದೇ ಸೂರಿನಡಿ ದೊರೆಯಲಿವೆ.