ಮೈಸೂರು: ಹೊಸ ಆ್ಯಪ್ ಡೌನ್‌ಲೋಡ್ ಹೆಸರಿನಲ್ಲಿ ನಗರದ ಆರ್‌ಬಿಐ ಉದ್ಯೋಗಿಯೊಬ್ಬರು 98 ಸಾವಿರ ರೂ. ಕಳೆದುಕೊಂಡಿದ್ದಾರೆ.
ವ್ಯಾಟ್ಸ್‌ಆ್ಯಪ್‌ಗೆ ಬಂದ ಸಂದೇಶವನ್ನು ನೋಡುತ್ತಿದ್ದಾಗ ಒಟಿಪಿ ಬಳಸಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಸೂಚಿಸಲಾಗಿದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಲಾಯಿತು.
ಆಗ ನನ್ನ ಗಮನಕ್ಕೆ ಬಾರದೇ ವಂಚಕರು ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಉದ್ಯೋಗಿ ದೂರಿನಲ್ಲಿ ತಿಳಿಸಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.