ಜಿಲ್ಲೆ

ಆನ್‌ಲೈನ್‌ನಲ್ಲಿ 9.43 ಲಕ್ಷ ರೂ. ವಂಚನೆ

ಬಳ್ಳಾರಿ : ಷೇರು ವಹಿವಾಟಿನಲ್ಲಿ 2 ಲಕ್ಷ ರೂ. ಹೂಡಿಕೆ ಮಾಡಿದರೆ ಶೇ. 40ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ ನಗರದ ಮಹಿಳೆಯೊಬ್ಬರಿಗೆ ಆನ್‌ಲೈನ್‌ನಲ್ಲಿ 9.43 ಲಕ್ಷ ರೂ. ವಂಚಿಸಲಾಗಿದೆ.
ಇತ್ತೀಚೆಗೆ ಮಹಿಳೆಯ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿದ್ದ ವಂಚಕರು ಅವರೊಂದಿಗೆ ಮಾತುಕತೆ ಮಾಡಿ, ಗ್ರೂಪ್‌ವೊಂದಕ್ಕೆ ಸೇರಿಸಿದ್ದಾರೆ. ಯಾವ ದಿನ ಯಾವ ಷೇರಿನ ಮೇಲೆ ಹೂಡಿಕೆ ಮಾಡಬೇಕು ಎಂಬುದರ ಮಾಹಿತಿ ನೀಡುತ್ತೇವೆ ಎಂದಿದ್ದ ವಂಚಕರು, ತಾವು ಹೇಳಿದ ಕಡೆ ಹೂಡಿಕೆ ಮಾಡಿದರೆ 2 ಲಕ್ಷ ರೂ. ಶೇ 40ರಷ್ಟು ಲಾಭಾಂಶ ನೀಡುವುದಾಗಿ ಹೇಳಿ‌ ಮೋಸ ಮಾಡಿದ್ದಾರೆ. ಈ‌ ಕುರಿತು ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.