ಬಳ್ಳಾರಿ : ಇಲ್ಲಿನ ಬಸವೇಶ್ವರ ಕಾಲನಿಯ ಮೆಡಿಕಲ್ ಸ್ಟೋರ್ ಮಾಲೀಕರೊಬ್ಬರು ಆನ್‌ಲೈನ್‌ನಲ್ಲಿ 56. 24 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.
ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ ನೋಡುತ್ತಿರುವಾಗ ಒಂದು ವರ್ಕ್ ಫ್ರಮ್ ಹೋಂ ಎಂದು ಯಾಡ್ ಬಂದಿರುವುದು ನೋಡಿ, ಲೈಕ್ ಮಾಡಲಾಗಿದೆ. ನಂತರ ಟೆಲಿಗ್ರಾಂನಲ್ಲಿ ಮಾಯ ಎಂಬ ಹೆಸರಿನಿಂದ ವ್ಯಕ್ತಿ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ, ಮ್ಯಾರಿಯೇಟ್ ಕಂಪನಿಯಲ್ಲಿ ಪಾರ್ಟ್ ಟೈಂ ಕೆಲಸ ಮಾಡಲು ಬಯಸಿದ್ದಾಗಿ ಚಾಟ್ ಮಾಡಿದ್ದರು. ನಂತರ ಪಾರ್ಟ ಟೈಂ ಕೆಲಸಕ್ಕೆ ಆನ್‌ಲೈನ್ ತರಬೇತಿ ನೀಡುವದಾಗಿ ಹಂತ ಹಂತವಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.