ಬಳ್ಳಾರಿ: ಹೂಡಿಕೆಗೆ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಇಲ್ಲಿನ ವ್ಯಕ್ತಿಯೊಬ್ಬರಿಗೆ ಆನ್‌ಲೈನ್‌ನಲ್ಲಿ 25.60 ಲಕ್ಷ ರೂ. ವಂಚಿಸಲಾಗಿದೆ.
ಷೇರು ಮಾರುಕಟ್ಟೆ ವ್ಯವಹಾರದ ಬಗ್ಗೆ ವ್ಯಕ್ತಿಗೆ ವಾಟ್ಸ್‌ಆ್ಯಪ್‌ಗೆ ಸಂದೇಶ ಬಂದಿದೆ. ಅದರಲ್ಲಿ ತಿಳಿಸಿದ್ದ ಗ್ರೂಪ್‌ಗೆ ದೂರುದಾರ ಸೇರ್ಪಡೆಗೊಂಡಿದ್ದಾರೆ. ಬಳಿಕ 2 ಲಕ್ಷ ರೂ. ಹೂಡಿದರೆ, ಶೇ. 500ರಷ್ಟು ಲಾಭಾಂಶ ನಿಡುವುದಾಗಿ ಗ್ರೂಪ್‌ನಲ್ಲಿ ತಿಳಿಸಲಾಗಿದೆ. ಇದನ್ನು ನಂಬಿ ವ್ಯಕ್ತಿ 2. 52 ಲಕ್ಷ ರೂ. ಹಣ ಪಾವತಿಸಿದ್ದಾರೆ. ಇದರ ಬೆನ್ನಿಗೇ ಹೂಡಿಕೆಗೆ ಪ್ರತಿಯಾಗಿ 10 ಲಕ್ಷ ರೂ. ಹಣ ಪಾವತಿಯಾಗಿರುವದಾಗಿ ಸಂದೇಶ ಬಂದಿದೆ. ಹೀಗಿರುವಾಗಲೇ ನಿಮಗೆ 30 ಲಕ್ಷ ರೂ. ಸಾಲ ಮಂಜೂರಾಗಿದ್ದು, ಅದನ್ನು ಪಡೆಯಲು 23.08 ಲಕ್ಷ ರೂ. ಪಾವತಿಸಬೇಕು ಎಂದು ಅದೇ ವಾಟ್ಸ್‌ಆ್ಯಪ್ ಗ್ರೂಪ್‌ನ ಸದಸ್ಯನೊಬ್ಬ ಹೇಳಿದ್ದಾನೆ. ನಂಬಿ ಹಣ ಪಾವತಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಅವರು ದೂರು ದಾಖಲಾಗಿದೆ.