ಜಿಲ್ಲೆ

ಆನ್‌ಲೈನ್ ದೋಖಾ: 7.79 ಲಕ್ಷ ರೂ. ವಂಚನೆ

ಮೈಸೂರು: ಆನ್‌ಲೈನ್ ವಂಚನೆಯಿಂದ ಜೆ.ಪಿ.ನಗರ ನಿವಾಸಿಯೊಬ್ಬರು 7.79 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಆ್ಯಪ್ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸಿದ್ದಾರೆ. ಬಳಿಕ ಅಲ್ಲಿನ ಪ್ರತಿನಿಧಿಗಳ ಮಾತನ್ನು ನಂಬಿ ಹೆಚ್ಚಿನ ಲಾಭದ ಆಸೆಗೆ ಹಣವನ್ನು ಹೂಡಿದ್ದಾರೆ.

ಕೆಲ ದಿನಗಳ ಬಳಿಕ ಹೂಡಿಕೆ ಮಾಡಿದ್ದ ಹಣ ವಾಪಸ್ ಬರಲಿಲ್ಲ. ಆಗಲೇ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.