ಜಿಲ್ಲೆ

ಆನ್‌ಲೈನ್ ಜಾಬ್ ನೆಪದಲ್ಲಿ 17.15 ಲಕ್ಷ ರೂ.ವಂಚನೆ

ಮೈಸೂರು: ಆನ್‌ಲೈನ್ ಜಾಬ್ ನೆಪದಲ್ಲಿ ಖಾಸಗಿ ಸಂಸ್ಥೆ ಉದ್ಯೋಗಿಯನ್ನು ಮೋಸದ ಜಾಲಕ್ಕೆ ಕೆಡವಿ, 17.15 ಲಕ್ಷ ರೂ. ವಂಚಿಸಲಾಗಿದೆ.

ಬೋಗಾದಿ ನಿವಾಸಿಯಾಗಿರುವ ಖಾಸಗಿ ಸಂಸ್ಥೆ ಉದ್ಯೋಗಿಯೊಬ್ಬರು ಟೆಲಿಗ್ರಾಂ ಆ್ಯಪ್ ಬಳಸುವಾಗ ಆನ್‌ಲೈನ್ ಕೆಲಸದ ಕುರಿತು ಜಾಹೀರಾತು ಬಂದಿದೆ. ಅಲ್ಲಿ ಕಾಣಿಸಿದ ಲಿಂಕ್ ಮೂಲಕ ಮಾ.1ರಂದು ಪ್ಯಾಂಪ್(ಪಿಎಎಂಪಿ) ಕಂಪನಿಗೆ ಸೇರಿದ್ದಾರೆ.

ಬಳಿಕ ಪ್ಯಾಂಪ್ ಮಿಂಟೆಡ್ ಗೋಲ್ಡ್ ಕಾಯಿನ್ ಎಂಬ ಗ್ರೂಪ್ ಮೂಲಕ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುವುದೆಂಬ ವಂಚಕರ ಸಂದೇಶ ಕಳುಹಿಸಿದ್ದಾರೆ. ಇವರ ಮಾತು ನಂಬಿ ಹಂತ ಹಂತವಾಗಿ 17.15 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.

ನಂತರ ಈ ಬಗ್ಗೆ ವಿಚಾರಿಸಿದಾಗ ಇದೊಂದು ವಂಚನೆಯ ಜಾಲ ಎಂಬುದು ಗೊತ್ತಾಗಿದೆ. ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.