ಬಳ್ಳಾರಿ : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಶೇ 100ರಷ್ಟು ಲಾಭಾಂಶ ಕೊಡಿಸುವುದಾಗಿ ನಂಬಿಸಿ ನಗರದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್‌ನಲ್ಲಿ 36 ಲಕ್ಷ ರೂ. ವಂಚಿಸಲಾಗಿದೆ.
ಖಾಸಗಿ ಕಂಪನಿಯೊಂದರ ನೌಕರರಾಗಿರುವ ವ್ಯಕ್ತಿಯನ್ನು ಅಪರಿಚಿತರು ಇತ್ತೀಚೆಗೆ ವಾಟ್ಸಾಪ್ ಗ್ರೂಪೊಂದಕ್ಕೆ ಸೇರಿಸಿದ್ದರು. ಅಲ್ಲಿ ಹೂಡಿಕೆ ಬಗ್ಗೆ ಗ್ರೂಪ್‌ನ ಸದಸ್ಯರು ಚರ್ಚೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಷೇರು ವಹಿವಾಟಿಗಾಗಿ ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಿದ್ದಾರೆ. ಅವರು ಹೇಳಿದ ಮಾತು ನಂಬಿ ವ್ಯಕ್ತಿಯು ಹಂತ ಹಂತವಾಗಿ ಹಣ ಪಾವತಿಸಿದ್ದಾರೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ