ಜಿಲ್ಲೆ

ಆನೆಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾದ ಅರಣ್ಯ ಸಿಬ್ಬಂದಿ ; ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಗಜಗಳು

ಕೊಡಗು : ಕಳೆದ ಒಂದೂವರೆ ತಿಂಗಳಿನಿಂದ ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕೃಷಿ ಸಲನ್ನು ಹಾನಿ ಮಾಡುತ್ತ ರೈತರಿಗೆ ತಲೆನೋವಾಗಿದ್ದ ಕಾಡಾನೆಗಳನ್ನು ಮೀಸಲು ಅರಣ್ಯಕೆ ಅಟ್ಟುವಲ್ಲಿ ಸೋಮವಾರಪೇಟೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.


ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ, ಗರ್ವಾಲೆ, ಕುಂಬಾರಗಡಿಗೆ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಓಡಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.


ಕಳೆದ 3 ದಿನಗಳಿಂದ ಸೋಮವಾರಪೇಟೆ ವಲಯ ಅರಣ್ಯ ಇಲಾಖೆಯ ಆರ್‌ಆರ್‌ಟಿ ತಂಡ ಹಾಗು ಎಲಿೆಂಟ್ ಟಾಸ್‌‌ಕೆೆರ್ಸ್‌ನ ಸಿಬ್ಬಂದಿ ಸೇರಿದಂತೆ ಒಟ್ಟು 35 ಮಂದಿಯ ತಂಡ ಕಾರ್ಯಾಚರಣೆ ನಡೆಸಿ, ಜನವಸತಿ ಹಾಗೂ ಕೃಷಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಮಂಗಳವಾರ ಸಂಜೆ ಮರಳಿ ಅರಣ್ಯಕ್ಕೆ ಅಟ್ಟಿದ್ದಾರೆ.


ಕುಂಬಾರ ಗಡಿಗೆಯಿಂದ ಮರಿಯಾನೆಯನ್ನು ಒಳಗೊಂಡಂತೆ ಒಟ್ಟು 4 ಆನೆಗಳು ಕಾಜೂರು ಅರಣ್ಯ ಸೇರಿವೆ. ಯಡವನಾಡು ಮೀಸಲು ಅರಣ್ಯದಿಂದ ಹಾನಗಲ್ಲು, ಕಿರಗಂದೂರು, ತಾಕೇರಿ, ಹರಗ ಮೂಲಕ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ, ಕುಂಬಾರಗಡಿಗೆ ಭಾಗಕ್ಕೆ ತೆರಳಿದ್ದ ಮರಿಯಾನೆಯನ್ನು ಒಳಗೊಂಡಂತೆ ಮೂರು ಕಾಡಾನೆಗಳು ಹಾಗೂ ಮಡಿಕೇರಿ ಭಾಗದ ಮುಟ್ಲು, ಮುಕ್ಕೋಡ್ಲು ಭಾಗದಿಂದ ಆಗಮಿಸಿದ್ದ ಒಂಟಿಸಲಗ ಗರ್ವಾಲೆ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದವು.


ಹಗಲಿನ ವೇಳೆಯಲ್ಲಿ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳಿಂದ ಹೆದರಿದ ರೈತರು, ಕೃಷಿ ಭೂಮಿಗೆ ತೆರಳದೆ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಇತ್ತು. ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ತೆರಳಲು ಭಯಪಡುತ್ತಿದ್ದರು. ತೋಟದಲ್ಲಿದ್ದ ಬಾಳೆಗಿಡಗಳನ್ನು ಮುರಿದು ಹಾಳು ಮಾಡಿದ್ದವು. ಕಾಫಿ ಗಿಡಗಳನ್ನು ತುಳಿದು ನಾಶಪಡಿಸುತ್ತಿದ್ದವು.


ಸೋಮವಾರಪೇಟೆ ವಲಯ ಅರಣ್ಯಾಕಾರಿ ಚೇತನ್ ನೇತೃತ್ವದಲ್ಲಿ ಕಳೆದ 3 ದಿನಗಳಿಂದ ಕೂಂಬಿಂಗ್ ನಡೆಸಿ, ಕೊನೆಗೂ ಕಾಜೂರು ಅರಣ್ಯಕ್ಕೆ ಕಾಡಾನೆಗಳನ್ನು ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.


ಕುಂಬಾರಗಡಿಗೆಯಲ್ಲಿದ್ದ ಒಟ್ಟು 4 ಆನೆಗಳನ್ನು ಹರಗ, ತಾಕೇರಿ, ಕಿರಗಂದೂರು, ಹಾನಗಲ್ಲುಶೆಟ್ಟಳ್ಳಿ-ಹಾನಗಲ್ಲು ಗ್ರಾಮದ ಗಡಿ, ದುದ್ದುಗಲ್ಲು ಹೊಳೆ ಮೂಲಕ ಮರಳಿ ಕಾಜೂರು ಅರಣ್ಯಕ್ಕೆ ಓಡಿಸಲಾಯಿತು.

ಮರಿಯಾನೆಯನ್ನು ಒಳಗೊಂಡಂತೆ ಎರಡು ಹೆಣ್ಣಾನೆಗಳು ಕಾಜೂರು ಅರಣ್ಯದಿಂದಲೇ ಗರ್ವಾಲೆಗೆ ತೆರಳಿದ್ದವು. ಈ ಗುಂಪಿಗೆ ಮುಕ್ಕೋಡ್ಲು ಭಾಗದಿಂದ ಬಂದಿರುವ ಒಂಟಿ ಸಲಗವೂ ಸೇರಿಕೊಂಡಿದ್ದು, ಕಾರ್ಯಾಚರಣೆ ಸಂದರ್ಭ ಒಂಟಿ ಸಲಗ ಕಾಜೂರು ಅರಣ್ಯಕ್ಕೆ ಬಂದಿದೆ. ಇದು ಮುಂದಿನ ದಿನಗಳಲ್ಲಿ ಮತ್ತೆ ಅದೇ ಮಾರ್ಗವಾಗಿ ಮುಕ್ಕೋಡ್ಲು, ಮುಟ್ಲು ಅರಣ್ಯ ಭಾಗಕ್ಕೆ ತೆರಳಲೂಬಹುದು.
ಚೇತನ್, ವಲಯ ಅರಣ್ಯಾಕಾರಿ, ಸೋಮವಾರಪೇಟೆ.