ಜಿಲ್ಲೆ

ಆನೆ ದಾಳಿಗೆ ವ್ಯಕ್ತಿ ಬಲಿ


ಕೊಡಗು: ಕಾಡಾನೆ ದಾಳಿಗೆ ಸಿಲುಕಿ ರೈತನೋರ್ವ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಆಡಿನಾಡೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.


ಗ್ರಾಮ ನಿವಾಸಿ ಈರಪ್ಪ(63) ಮೃತ. ಬೆಳಗ್ಗೆ ಗೌರಿಕಟ್ಟೆಯ ತಮ್ಮ ಹೋಲಕ್ಕೆ ಹೋದ ಸಂದರ್ಭ ಪಕ್ಕದ ಅರಣ್ಯದಿಂದ ಬಂದ ಕಾಡಾನೆ ದಾಳಿ ನಡೆಸಿ, ತುಳಿದು ಸಾಯಿಸಿದೆ. ಹಣೆಯ ಭಾಗಕ್ಕೆ ಕೊರೆಯಿಂದ ತಿವಿದ ಗಾಯವಾಗಿದ್ದು, ಎಡಗಾಲು ಮುರಿದಿದ್ದು ರೈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಪತಿ ತಡವಾದರೂ ಮನೆಗೆ ಬಾರದ ಕಾರಣ ಪತ್ನಿ ಹೇಮಾವತಿ ಹುಡುಕಿಕೊಂಡು ಹೋದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಡಿವೈಎಸ್‌ಪಿ ಗಂಗಾಧರಪ್ಪ, ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್, ಎಸಿಎಫ್ ಎ.ಎ.ಗೋಪಾಲ್, ಆರ್‌ಎಫ್‌ಒ ಚೇತನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

a