ಯಾದಗಿರಿ: ಮಾನ ಜನ್ಮ ದೊಡ್ಡದು, ಇದ ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದು ದಾಸರು ಹಾಡಿದಂತೆ ನಮಗೆ ದೊರೆತ ಈ ಅಮೂಲ್ಯ ಜನ್ಮವನ್ನು ಪಾವನಗೊಳಿಸಲು ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಬೇಕು ಎಂದು ಫಕೀರೇಶ್ವರ ಮಠದ ಪೀಠಾಪತಿ ಶ್ರೀ ಗುರುಪಾದ ಸ್ವಾಮುಗಳು ನುಡಿದರು.
ಮಂಗಳವಾರ ಶಹಾಪುರ ನಗರದ ಶ್ರೀಮಠದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆಯಿಂದ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ವೃತ ಹಾಗೂ ಧರ್ಮಸಭೆಗೆ ಚಾಲನೆ ನೀಡಿ ಹಿತೋಪದೇಶ ನೀಡಿ, ಪುರಾಣದಲ್ಲಿ ತಿಳಿಸಿರುವಂತೆ ಸತ್ಯ ನಾರಾಯಣ ಪೂಜೆ ಕೈಗೊಂಡ ಭಕ್ತರ ಇಷ್ಟಾರ್ಥವನ್ನು ಶ್ರೀಮನ್ನಾರಾಯಣ ಈಡೇರಿಸಲಿದ್ದಾನೆ, ಇದು ಸತ್ಯ ಕೂಡ ಎಂದರು.
ಸಾಕಷ್ಟು ಭಕ್ತರ ವೃಂದ ಇದರಿಂದ ಸಂತುಷ್ಟತೆಯನ್ನು ಕಂಡುಕೊಂಡಿದೆ. ಧಾಮರ್ಿಕ ಕಾರ್ಯಗಳಲ್ಲಿ ಭಾಗವಹಿಸುವದರಿಂದ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದು. ಅಲ್ಲದೆ ಮನಸ್ಸಿನಲ್ಲಿ ಸದಾ ಸಕಾರಾತ್ಮಕ ಚಿಂತನೆಗಳು ಮೂಡುತ್ತವೆ. ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು.