ಬಾಗಲಕೋಟೆ ನಗರದ ಟೆಂಗಿನಮಠದಲ್ಲಿ ಹಮ್ಮಿಕೊಂಡಿದ್ದ ಲಿಂ. ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಲಿಂ. ರೇವಣಸಿದ್ದೇಶ್ವರ ಸ್ವಾಮೀಜಿ ಪುಣ್ಯ ಸ್ಮರಣೆ ಕಾರ್ಯಕ್ರಮ ಚರಂತಿಮಠದ ಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಬಸವರಾಜ ಮುಕ್ಕುಪ್ಪಿ, ಜಯಾ ಭದ್ರಶೆಟ್ಟಿ, ಅಶೋಕ ಪ್ರಭುಗೋಳ ಇದ್ದರು. 
ಜಿಲ್ಲೆ

ಆಧ್ಯಾತ್ಮದಿಂದ ನೆಮ್ಮದಿ

ಬಾಗಲಕೋಟೆ: ಜೀವನದಲ್ಲಿ ಅಽಕಾರ, ಹಣ, ಅಂತಸ್ತು ಎಷ್ಟೇ ಇದ್ದರು ಸಹ ಆಧ್ಯಾತ್ಮ ತಳಹದಿಯಲ್ಲಿ ಜೀವನ ಸಾಗಿಸಬೇಕು. ಅದರಿಂಧ ವಿಮುಖರಾದ ಪರಿಣಾಮ ನೆಮ್ಮದಿ ಕಳೆದುಕೊಂಡಿದ್ದೇವೆ ಎಂದು ಚರಂತಿಮಠದ ಪ್ರಭು ಸ್ವಾಮೀಜಿ ಹೇಳಿದರು.

ನಗರದ ಟೆಂಗಿನಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಲಿಂ. ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಲಿಂ. ರೇವಣಸಿದ್ದೇಶ್ವರ ಸ್ವಾಮೀಜಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮಗೆ ನಾವೇ ತಿದ್ದಿಕೊಳ್ಳುವ ಶಕ್ತಿ ಆಧ್ಯಾತ್ಮದಲ್ಲಿ ಇದೆ. ಅರಿವೇ ಗುರು ಅಂತ ಬಸವಣ್ಣನವರು ಸಾರಿ ಸಾರಿ ಹೇಳಿದ್ದಾರೆ. ಈ ಕ್ಷಣ ನಮ್ಮದು ಅಂತ ಬದುಕುಬೇಕು. ಸಂತೋಷ, ನೆಮ್ಮದಿಯಿಂದ ಬದುಕಬೇಕು ಎಂದರು.

ಗವಿಸಿದ್ದೇಶ್ವರ ಶಾಸಿöಗಳು ೧೧ ದಿನಗಳ ಕಾಲ ಶರಣಬಸವೇಶ್ವರ ಜೀವನ ಕುರಿತು ಪ್ರವಚನ ನೀಡಿದರು. ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು ಇದ್ದರು. ಬಸವರಾಜ ಮುಕ್ಕುಪ್ಪಿ ಸ್ವಾಗತಿಸಿದರು. ಜಯಾ ಭದ್ರಶೆಟ್ಟಿ ಪ್ರಾರ್ಥಿಸಿದರು. ಅಶೋಕ ಪ್ರಭುಗೋಳ ನಿರೂಪಿಸಿದರು.