ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಕಲಾ ಕೂಟ ಸಹಯೋಗದಲ್ಲಿ ನಗರದ ನಟರಾಜ ಸಭಾಭವನದಲ್ಲಿ ಸೋಮವಾರ ಹಿರಿಯ ಜಾನಪದ ವಿದ್ವಾಂಸ ಟಿ.ಎಸ್.ರಾಜಪ್ಪ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಸಾಹಿತಿ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ರಾಜಪ್ಪ ಅವರ ಕೆಲಸ ಕಾರ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ ಎಂದು ಹೇಳಿದರು.
ಜಾನಪದ ಕ್ಷೇತ್ರದಲ್ಲಿ ಟಿ.ಎಸ್. ರಾಜಪ್ಪ ಅವರನ್ನು ಗುರುತಿಸುವ ಕಾರ್ಯವಾಗಿಲ್ಲ. ಅವರಿಗೆ ಜಾನಪದ ಕ್ಷೇತ್ರದ ಪ್ರಶಸ್ತಿಗಳು ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಇಂದಿನ ಆಧುನಿಕ ಯುಗದಲ್ಲಿ ಜಾನಪದ ಕಳೆದು ಹೋಗುತ್ತಿದೆ. ಇದನ್ನು ಉಳಿಸಿ ಬೆಳೆಸಿ ಕಲಾವಿದರಿಗೆ ಪ್ರೊತ್ಸಾಹಿಸಬೇಕಾಗಿದೆ. ಜಾನಪದ ಹಾಡುಗಳಿಂದ ನಮ್ಮ ಪಾರಂಪರಿಕತೆ ಉಳಿಸಿಕೊಳ್ಳಬೇಕಾಗಿದೆ. ನಮ್ಮ ಜೀವನ ಉದ್ದಕ್ಕೂ ಒಂದು ಕಲೆಯಾಗಿ ಕಾಣಬೇಕು ಎಂದರು.
ಸಾಹಿತಿಗಳಾದ ಡಾ.ಪಿ.ಕೆ.ರಾಜಶೇಖರ್, ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಎಸ್.ಶಿವರಾಜಪ್ಪ, ಹೊರೆಯಾಲ ದೊರೆಸ್ವಾಮಿ, ಎಸ್. ರಾಮಪ್ರಸಾದ್, ಕ್ಯಾತನಹಳ್ಳಿ ರಾಮಣ್ಣ, ಡಾ.ಎಚ್.ಟಿ. ಶೈಲಜಾ, ಪ್ರೊ.ಎಂ.ಜಿ. ಬಸವರಾಜ, ಡಿ.ಎನ್.ಲೋಕಪ್ಪ, ಎಚ್.ಎಂ. ನಾಗರಾಜರಾವ್, ಪಿ.ಕೃಷ್ಣಕುಮಾರ್, ಯು.ಎಸ್. ರಾಮಣ್ಣ, ಜೀನಹಳ್ಳಿ ಸಿದ್ದಲಿಂಗಪ್ಪ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕನ್ನಡ ಸಾಹಿತ್ಯ ಕಲಾ ಕೂಟ ಅಧ್ಯಕ್ಷ ಎಂ.ಚಂದ್ರಶೇಖರ್ ಇತರರು ಇದ್ದರು.