ಜಿಲ್ಲೆ

ಆಧುನಿಕ ಭರಾಟೆಗೆ ನಶಿಸುತ್ತಿರುವ ಕಲೆಗಳು

ಯಾದಗಿರಿ: ಜಾಗತೀಕರಣದ ಇಂದಿನ ಭರಾಟೆಯಲ್ಲಿ ಗ್ರಾಮೀಣ ಭಾಗದ ಸಾಂಪ್ರದಾಯಿಕ ಕಲೆಗಳು ಅಳಿನಂಚಿನಲ್ಲಿವೆ ಎಂದು ಪಶ್ಚಿಮಾದ್ರಿ ನೇರಡಗಂ ಮಠದ ಪೀಠಾಪತಿ ಶ್ರೀಪಂಚಮ ಸಿದ್ದಲಿಂಗ ಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

ವಡಿಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ಗುರುವಾರ ಸಂಜೆ ಯಾದಗಿರಿಯ ಅನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಜಾನಪದ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶೈಕ್ಷಣಿಕವಾಗಿ ನಾವು ಎಷ್ಟೇ ಉತ್ತುಂಗಕ್ಕೆ ಏರಿದರೂ ನಮ್ಮ ಕಲೆ ಹಾಗೂ ಸಂಪ್ರದಾಯಗಳನ್ನು ಬಿಡಕೂಡದು ಎಂದು ಸಲಹೆ ನೀಡಿದರು.

ಜಾನಪದ ಎಲ್ಲ ಕಲೆಗಳ ತಾಯಿ ಬೇರಿದ್ದಂತೆ. ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಹೊಂದಿಕೊಳ್ಳುತ್ತಿರುವ ಪರಿಣಾಮ ಗ್ರಾಮಿಣ ಜಾನಪದ ಕಲೆಗಳು ವಿನಾಶದತ್ತ ಸಾಗುತ್ತಿವೆ. ಈ ಕಲೆ ಕೇವಲ ಮನರಂಜನೆ ನೀಡುವಂತದ್ದಲ್ಲ. ಅದರಲ್ಲಿ ಸಾಕಷ್ಟು ವಿಚಾರಧಾರೆಗಳು ಹಾಗೂ ಮನುಷ್ಯನನ್ನು ಸನ್ಮಾರ್ಗ ತಲುಪುವ ಸಂದೇಶಗಳು ಅಡಗಿವೆ ಎಂದರು.

ಟ್ರಸ್ಟ್ನ ಗೌರವಾಧ್ಯಕ್ಷ ಮಲ್ಲೇಶ ಕುರುಕುಂದಿ ಮಾತನಾಡಿ, ಇಂದಿನ ಯಾಂತ್ರಿಕ ಯುಗದಲ್ಲಿ ಗ್ರಾಮೀಣ ಸಂಸ್ಕೃತಿ ಮುಳುಗಿ ಮುರಾಬಟ್ಟೆಯಾಗತ್ತಿದ್ದು ಇದನ್ನು ಉಳಸಿ, ಬೆಳಸಿಕೊಂಡು ಬರುವ ಕೆಲಸ ಈ ಸಂಸ್ಥೆಯದ್ದಾಗಿದೆ. ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಜಾನಪದ ಸಾಂಸ್ಕೃತಿಯ ವಾತವರಣ ನಿಮರ್ಾಣ ಮಾಡುತ್ತಿದೆ. ಇತ್ತೀಚಿನ ಯುವ ಪೀಳಿಗೆಗೆ ಜಾನಪದ, ಸೋಬಾನ ಪದ, ಬೀಸುವಪದ, ಕುಟ್ಟುವಪದ, ಹಾಗೂ ಹಂತಿಪದ ಬಯಲಾಟ ,ನೃತ್ಯದ ಕುರಿತು ಅಥರ್ೈಸಿಕೊಡುವ ಕೆಲಸ ಇನ್ನೂ ಭರದಿಂದ ನಡೆಯಬೇಕು ಎಂದು ಹೇಳಿದರು.
ಗದಗ ಜಿಲ್ಲೆಯ ದೀಪ ನೃತ್ಯ, ಜೋಗುತಿ ನೃತ್ಯ, ಬಂಜಾರ ನೃತ್ಯ, ಬೀದರ ಜಿಲ್ಲೆಯ ಬಂಜಾರ ನೃತ್ಯ, ಕೋಲಾಟ, ಜಾನಪದ ನೃತ್ಯ, ಜನಮನ ಸೆಳೆದವು ಹಲವಾರು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.