ಜಿಲ್ಲೆ

ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲಿ

ಗೋಕಾಕ: ರೈತರು ಕಷಿಯಲ್ಲಿ ಆಧುನಿಕ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ಕೃಷಿ ಇಲಾಖೆಯ ಸಹಾಯಧನದಲ್ಲಿ ಮಂಜೂರಾದ 9 ಕಬ್ಬು ಕಟಾವು ಯಂತ್ರಗಳನ್ನು ಸೋಮವಾರ ರೈತರಿಗೆ ವಿತರಿಸಿ ಮಾತನಾಡಿದರು.

ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಎಚ್​.ಡಿ.ಕೋಳೆಕರ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 3.15 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಆದರೆ ಕಬ್ಬು ಕಟಾವು ಮಾಡಲು ಗ್ಯಾಂಗ್​ ಹಾಗೂ ಕೂಲಿಕಾರರನ್ನು ಹುಡುಕುವುದು ದೊಡ್ಡ ಸವಾಲವಾಗಿದೆ. 2023&24ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 141 ಅರ್ಜಿ ಸಲ್ಲಿಕೆಯಾಗಿದ್ದು, ಲಾಟರಿ ಮೂಲಕ 31 ಜನರಿಗೆ ಕಬ್ಬು ಕಟಾವು ಯಂತ್ರ ವಿತರಿಸಲಾಗಿತ್ತು. 2024&25ರಲ್ಲಿ ಒಟ್ಟು 379 ಅರ್ಜಿ ಸಲ್ಲಿಕೆಯಾಗಿದ್ದು 77 ಜನರಿಗೆ ಕಬ್ಬು ಕಟಾವು ಯಂತ್ರ ವಿತರಿಸಲಾಗಿದೆ ಎಂದರು. ಒಟ್ಟು 98 ಲ ರೂ. ಮೌಲ್ಯದ ಕಬ್ಬು ಕಟಾವು ಯಂತ್ರವನ್ನು ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿರತಸಲಾಗುತ್ತಿದೆ ಎಂದರು.

ತಾಲೂಕಿನಲ್ಲಿ 2024&25ನೇ ಸಾಲಿಗೆ 24 ಅರ್ಜಿ ಸಲ್ಲಿಕೆಯಾಗಿದ್ದು, 9 ಜನರಿಗೆ ಕಬ್ಬು ಕಟಾವು ಯಂತ್ರ ವಿತರಿಸಲಾಗಿದೆ. ಯಂತ್ರವು ಒಂದು ಗಂಟೆಗೆ 15&20 ಟನ್​ ಕಬ್ಬು ಕಟಾವು ಮಾಡುತ್ತದೆ. ಒಂದು ದಿನದಲ್ಲಿ 6&8 ಎಕರೆ ಕಟಾವು ಮಾಡಬಹುದಾಗಿದೆ ಎಂದು ಹೇಳಿದರು.

ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾ, ಭೀಮಗೌಡ ಪೋಲೀಸಪಾಟೀಲ, ಸುರೇಶ ಸನದಿ, ಜಿಪಂ ಮಾಜಿ ಸದಸ್ಯ ಟಿ.ಆರ್​.ಕಾಗಲ, ಮಡ್ಡೆಪ್ಪ ತೋಳಿನವರ ಇತರರಿದ್ದರು.