ಚಿತ್ರದುರ್ಗ: ಜಿಲ್ಲೆಯಲ್ಲಿ 14ಲಕ್ಷಕ್ಕೂ ಅಧಿಕ ಆಯುಷ್ಮಾನ್‌ಕಾರ್ಡ್ ವಿತರಣೆ ಗುರಿ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಹೇಳಿದ ರು. ನಗರದ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಬುಧವಾರ ಕೇಂದ್ರದ ಆಯುಷ್ಮಾನ್‌ಭವ ಅಂತ್ಯೋದಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಈವರೆಗೆ ಶೇ.37.5 ಪ್ರಮಾಣದಲ್ಲಿ ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ.
ಇನ್ನೂ 14 ಲಕ್ಷಕ್ಕೂ ಅಧಿಕ ಕಾರ್ಡ್‌ಗಳನ್ನು ವಿತರಿಸಲಾಗುವುದು. ಈ ನಿಟ್ಟಿನಲ್ಲಿ ಕಾರ್ಡ್‌ಗಳ ವಿತರಣೆಗೆ ಆದ್ಯತೆ ಮೇರೆಗೆ ಕೆಲಸ ಮಾಡುವಂತೆ ಇಲಾಖೆ ಅಧಿಕಾರಿ,ಸಿಬ್ಬಂದಿಗೆ ಸೂಚಿಸಿದರು. ಆಯುಷ್ಮಾನ್‌ಭವದ ಉದ್ದೇಶ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವುದಾಗಿದೆ. ಆಯು ಷ್ಮಾನ್‌ಆಪ್ಕೆದ್ವಾರ್ 3.0 ಕಾರ‌್ಯಕ್ರಮದಡಿ ಸೆ.17ರಿಂದ ನಾಗರಿಕರಿಗೆ ಕಾರ್ಡ್‌ಗಳನ್ನು ವಿತರಿಸಲಾಗುವುದು. ಆಯುಷ್ಮಾನ್‌ಆರೋಗ್ಯ ಶಿಬಿರ ಏ ರ್ಪಡಿಸಿ ಜನರ ಆರೋಗ್ಯ ತಪಾಸಣೆ,ಪ್ರಯೋಗಾಲಯ ಪರೀಕ್ಷೆ ಹಾಗೂ ವಿವಿಧ ರಾಷ್ಟ್ರೀಯ ಕಾರ‌್ಯಕ್ರಮಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು.
ಆರೋಗ್ಯ ಮೇಳವನ್ನು 4 ವಾರಗಳಲ್ಲಿ ಹಮ್ಮಿಕೊಳ್ಳಲಾಗುವುದು. ಮೊದಲನೇ ವಾರ ಎನ್‌ಸಿಡಿ ಸೇವೆಗಳು,ಮಾಹಿತಿ,2ನೇ ವಾರ ಸಾಂಕ್ರಾ ಮಿಕ ರೋಗಗಳ ಸೇವೆಗಳ ಮಾಹಿತಿ,3ನೇ ವಾರ ತಾಯಿ-ಮಕ್ಕಳ ಸೇವೆ ಕುರಿತು ಮಾಹಿತಿ ಹಾಗೂ 4ನೇ ವಾರ ರಾಜ್ಯ,ಜಿಲ್ಲೆಯಲ್ಲಿ ಇರುವಂತಹ ನಿ ಗದಿತ ರೋಗಗಳ ಸೇವೆಗಳ ಮಾಹಿತಿ ನೀಡಲಾಗುವುದು ಎಂದರು. ಅಕ್ಟೋಬರ್ 2ರಿಂದ ಗ್ರಾಮ,ವಾರ್ಡ್‌ಗಳಲ್ಲಿ ಆಯುಷ್ಮಾನ್ ಸಭೆ ನಡೆಸಿ ಕಾರ್ಡ್,ಆರೋಗ್ಯ ಸೇವೆಗಳು,ವಿವಿಧ ರೋಗಗಳ ತಪಾಸಣೆ,ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು,17ರಿಂದ ಡಿಸೆಂಬರ್ ಅಂತ್ಯದವರೆಗೆ ಈ ಕಾರ‌್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಜಿಲ್ಲಾ ಕಾರ‌್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚಂದ್ರಶೇಖರ್‌ಕಂಬಾಳಿಮಠ್,ರೋಗ ಶಾಸ್ತ್ರಜ್ಞ ಡಾ.ರುದ್ರೇಶ್,ಎನ್‌ಸಿಡಿ ಜಿಲ್ಲಾ ಸಂಯೋಜಕಿ ಡಾ.ಶ್ವೇತಾ,ತಾಲೂಕು ಆರೋಗ್ಯ ಶಿಕ್ಷಾಣಾಧಿಕಾರಿ ಎನ್.ಎಸ್.ಮಂಜುನಾಥ್ ಮತ್ತಿತರರು ಇದ್ದರು.