ಜಿಲ್ಲೆ

ಆದೇಶ ರದ್ದುಗೊಳಿಸಲು ಕಂದಕೂರ ಆಗ್ರಹ

ಯಾದಗಿರಿ: ದೇವದುರ್ಗ ತಾಲೂಕಿನ ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆಸಿ ಸೇವೆಯಿಂದ ಅಮಾನತುಗೊಂಡ ೧೮ ಪಿಡಿಒ ಹಾಗೂ ಐವರು ಕಾರ್ಯದರ್ಶಿಗಳನ್ನು ಯಾದಗಿರಿ ಜಿ¯್ಲೆಗೆ ನಿಯೋಜಿಸಿರುವ ಆದೇಶ ಕೂಡಲೇ ರದ್ದುಗೊಳಿಸಬೆಕು ಎಂದು ಶಾಸಕ ಶರಣಗೌಡ ಕಂದಕೂರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿz್ದÁರೆ.

ಮೊದಲೇ ಜಿ¯್ಲÉಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಮತ್ತು ಜಿ¯್ಲÁ ಕೆಡಿಪಿ ಸಭೆ ಒಳಗೆ ಹಾಗೂ ಹೊರಗೆ ಧ್ವನಿ ಎತ್ತಿದರೂ ಈಗ ಮತ್ತೆ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರುವ ಅಧಿಕಾರಿಗಳನ್ನು ಜಿ¯್ಲÉಗೆ ವರ್ಗಾವಣೆ ಮಾಡಿರುವುದನ್ನು ಅವರು ಖಂಡಿಸಿz್ದÁರೆ.

ಪAಚಾಯಿತಿಗಳ ಪ್ರತಿ ಹಂತದಲ್ಲೂ ಅವ್ಯವಹಾರ ತುಂಬಿ ತುಳುಕುತ್ತಿದೆ. ವಿಶೇಷವಾಗಿ ಕಲುಷಿತ ನೀರಿನ ಅನೇಕ ಪ್ರಕರಣ ತಡೆಗಟ್ಟುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದು, ಗುರುಮಠಕಲï ಕ್ಷೇತ್ರದ ಅನಪುರ ಗ್ರಾಮದಲ್ಲಿ ಕಳೆದ ವರ್ಷ ಕಲುಷಿತ ನೀರು ಸೇವನೆಯಿಂದ ಮೂರು ಜನ ಮೃತಪಟ್ಟಿz್ದÁರೆ. ಈ ವರ್ಷವೂ ಕಲುಷಿತ ನೀರು ಸೇವನೆಯ ಪ್ರಕರಣಗಳು ದಾಖಲಾಗಿವೆ. ಉದ್ಯೋಗ ಖಾತ್ರಿ ಯೋಜನೆ ಹಾಗೂ ಕೂಲಿ ಕಾರ್ಮಿಕರ ಹಣಕ್ಕೆ ಕತ್ತರಿ ಹಾಕಿರುವ ಸಾಕಷ್ಟು ದೂರುಗಳಿದ್ದು, ಇಂತಹ ಜಿಡ್ಡುಗಟ್ಟಿದ ಜಿ¯್ಲÉಗೆ ಇದಕ್ಕೆ ಪೂರಕವೆಂಬAತೆ ಮತ್ತೆ ಭ್ರಷ್ಟರನ್ನೇ ವರ್ಗಾವಣೆ ಮಾಡಿರುವುದು ಅನ್ಯಾಯ ಮಾಡಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿz್ದÁರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದÀ ಹಲವಾರು ಜನೋಪಯೋಗಿ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವz್ದÁಗಿರುತ್ತದೆ. ಕಾರಣ, ವರ್ಗಾವಣೆ ಆದೇಶ ರದ್ದುಪಡಿಸಿ ಹಿಂದುಳಿದ ಜಿ¯್ಲÉಯೆಂಬ ಹಣೆಪಟ್ಟಿ ಅಳಿಸುವ ನಿಟ್ಟಿನಲ್ಲಿ ದP್ಷÀ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳನ್ನು ನೇಮಕ ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.