ಚಿಕ್ಕಮಗಳೂರು ಆದಿವಾಸಿ ಸಮುದಾಯದವರಿಗೆ ಗುಣಮಟ್ಟದ ಪೌಷ್ಠಿಕ ಆಹಾರ ವಿತರಿಸಬೇಕು ಎಂದು ಸಮುದಾಯದ ಮುಖಂಡರು ಶುಕ್ರವಾರ ಸಮಾಜ ಗಿರಿಜನ ಅಭಿವೃದ್ದಿ ಇಲಾಖೆ ಸಮನ್ವ ಯಾಧಿಕಾರಿ ರಮೇಶ್ ಅವರಿಗೆ ಮನವಿ ಸಲ್ಲಿಸಿದರು. 
ಜಿಲ್ಲೆ

ಆದಿವಾಸಿಗಳಿಗೆ ಗುಣಮಟ್ಟದ ಆಹಾರ ವಿತರಣೆಗೆ ಒತ್ತಾಯ

ಚಿಕ್ಕಮಗಳೂರು: ಆದಿವಾಸಿ ಸಮುದಾಯದವರಿಗೆ ಗುಣಮಟ್ಟದ ಪೌಷ್ಠಿಕ ಆಹಾರ ವಿತರಿಸಬೇಕು ಎಂದು ಸಮುದಾಯದ ಮುಖಂಡರು ಶುಕ್ರವಾರ ಸಮಾಜ ಗಿರಿಜನ ಅಭಿವೃದ್ದಿ ಇಲಾಖೆ ಸಮನ್ವ ಯಾಧಿಕಾರಿ ರಮೇಶ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಆದಿವಾಸಿ ಜನಾಂಗದ ಮುಖಂಡ ಗೋಪಾಲ್, ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಮ ಸೇರಿದಂತೆ ವಿವಿದೆಡೆ ಆದಿವಾಸಿ ಹಸಲರು, ಗೌಡಲು ಜನಾಂಗದವರಿಗೆ ಆಹಾರ ಪದಾರ್ಥಗಳು ಗು ಮಟ್ಟ ಕಾಪಾಡದೇ ಕಳಪೆಯಾಗಿ ಬೇಕಾಬೇಟ್ಟಿಯಾಗಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಆದಿವಾಸಿ ಜನಾಂಗದವರಿಗೆ ವರ್ಷಪೂರ್ತಿ ಸರ್ಕಾರ ಪೌಷ್ಟಿಕ ಆಹಾರ ಯೋಜನೆ ಜಾರಿಗೆ ತಂದು ವಿತರಿಸಲು ಸೂಚಿಸಿದ್ದು, ಕಳೆದ ಎರಡು ತಿಂಗಳಿನಿಂದ ಬಾಳೆಹೊನ್ನೂರು ಸುತ್ತಮುತ್ತಲು ಅಕ್ಕಿ, ಬೇಳೆಕಾಳು ಪದಾರ್ಥಗಳನ್ನು ರಸಗೊಬ್ಬರ ಚೀಲಗಳನ್ನು ತುಂಬಿಸಿ ಬಿಸಿಎಂ ಹಾಸ್ಟೆಲ್‌ಗಳ ಮೂಲಕ ವಿತರಿಸಲು ಸಜ್ಜಾ ಗುತ್ತಿದೆ ಎಂದು ಹೇಳಿದರು. ಕಳಪೆ ಆಹಾರದ ಸಂಬಂಧ ಅಧಿಕಾರಿಗಳಿಗೆ ದೂರನ್ನು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಲ್ಲ ಕೊಳೆತು ನಾರಿ ನೀರಾಗುತ್ತಿದೆ. ಅಧಿಕ ಪೌಷ್ಠಿಕ ಆಹಾರವನ್ನು ಗೊಬ್ಬರದ ಚೀಲಗಳಲ್ಲಿ ತುಂಬಿಟ್ಟು ಆದಿ ವಾಸಿಗಳಿಗೆ ವಿಷಯುಕ್ತ ಆಹಾರವನ್ನು ಉಣಿಸುವ ಕೆಲಸ ಗುತ್ತಿಗೆದಾರರು ಮಾಡುತ್ತಿದ್ದಾರೆ ಎಂದರು. ಕೂಡಲೇ ಕಳಪೆ ಆಹಾರ ಪದಾರ್ಥಗಳನ್ನು ತೆರವುಗೊಳಿಸಿ ಗುಣಮಟ್ಟದ ಆಹಾರವನ್ನು ವಿತರಿಸಬೇಕು ಹಾಗೂ ಕಳಪೆ ಆಹಾರ ಪೂರೈಸುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಜಿಲ್ಲಾವಾರು ಟೆಂಡರ್ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಆದಿವಾಸಿ ಸಮುದಾಯದ ಮುಖಂಡರಾದ ಚಂದು, ರಮೇಶ್, ಮಧು, ಗೋಪಾಲ್ ಮತ್ತಿತರರಿದ್ದರು.