ಜಿಲ್ಲೆ

ಆದಿವಾಸಿ ಸಮುದಾಯಗಳಿಗೆ ಶೇ.4ರಷ್ಟು ಮೀಸಲಾತಿ ನಿಗದಿಗೆ ಆಗ್ರಹ

ಮೈಸೂರು: ಅರಣ್ಯವಾಸಿ, ಆದಿವಾಸಿ ಸಮುದಾಯಗಳನ್ನು ವಿಶೇಷ ದುರ್ಬಲ ಗುಂಪು ಎಂದು ಪರಿಗಣಿಸಿ ಶೇ.4ರಷ್ಟು ಮೀಸಲಾತಿ ನಿಗದಿಪಡಿಸಿ ಈ ವರ್ಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಬುಡಕಟ್ಟು ಆದಿವಾಸಿ ಸುರಕ್ಷಾ ವೇದಿಕೆ ಆಗ್ರಹಿಸಿದೆ.


ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ನ್ಯಾ.ನಾಗಮೋಹನ್ ದಾಸ್ ಸಮಿತಿ ಶಿಫಾರಸಿನಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆ.

ಅದೇ ರೀತಿ ರಾಜ್ಯದಲ್ಲಿ ಅರಣ್ಯ ಆಧಾರಿತ ಆದಿವಾಸಿಗಳಾದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಜೇನು ಕುರುಬ, ಕೊರಗ, ಕಾಡು ಕುರುಬ, ಸೋಲಿಗರು, ಮಲೆ ಕುಡಿಯರು, ಹಸಲರು, ಇರುಳಿಗ, ಯರವ, ಪಣಿಯನ್, ಹಕ್ಕಿಪಿಕ್ಕಿ, ಸಿದ್ದಿ ಮತ್ತು ಗೌಡಲು ಸಮುದಾಯಗಳಿಗೆ ಒಳಮೀಸಲಾತಿ ನೀಡಿ ವಿಶೇಷ ಗುಂಪುಗಳು ಎಂದು ಪರಿಗಣಿಸಬೇಕು ಎಂದು ವೇದಿಕೆ ಅಧ್ಯಕ್ಷ ಡಾ.ಗಣೇಶ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


ಅಂತೆಯೇ, ಜೇನು ಕುರುಬ ಮತ್ತು ಕೊರಗ ಪಂಗಡಗಳನ್ನು ಮೂಲ ನಿವಾಸಿಗಳೆಂದು ವಿಶೇಷ ದುರ್ಬಲ ಗುಂಪು ಎಂದು ಘೋಷಿಸಿದೆ. ಅದರಂತೆ ಇನ್ನುಳಿದ ಹತ್ತು ಆದಿವಾಸಿ ಸಮುದಾಯಗಳನ್ನು ವಿಶೇಷ ದುರ್ಬಲ ಗುಂಪು ಎಂದು ಘೋಷಿಸಿ ಶೇ.4 ಮೀಸಲಾತಿಯನ್ನು ಕಾಯ್ದಿರಿಸಬೇಕು ಎಂದು ಆಗ್ರಹಿಸಿದರು.