ಧಾರವಾಡ: ಜಲಪಾತದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ ಆದಿತ್ಯ ಶಿವಳ್ಳಿ 2022- 23ನೇ ಸಾಲಿನ ರಾಷ್ಟ್ರೀಯ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಭಾಜನನಾಗಿದ್ದಾರೆ. 2020ರ ಜ. 14ರಂದು ಆದಿತ್ಯ ಕುಟುಂಬ ಸಮೇತ ಶಿರಸಿ ಬಳಿಯ ಮೋರೆಗಾರ ಾಲ್ಸ್‌ಗೆ ಹೋಗಿದ್ದರು. ಈ ವೇಳೆ ಸುಮಾರು 35 ಅಡಿ ಆಳದ ಜಲಪಾತದಲ್ಲಿ ಮುಳುಗುತ್ತಿದ್ದ ಮೂವರನ್ನು ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಇವರ ಸಾಹಸವನ್ನು ಪರಿಗಣಿಸಿ ರಾಜ್ಯ ಸರ್ಕಾರ 2021- 2022ನೇ ಸಾಲಿನ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಇದೀಗ ಭಾರತೀಯ ಮಕ್ಕಳ ಕಲ್ಯಾಣ ಪರಿಷತ್ತು (ಐಸಿಸಿಡಬ್ಲು) ಗಣರಾಜ್ಯೋತ್ಸವದಂದು ಕೊಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.