ಚಿತ್ರದುರ್ಗ: ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್‌ನ ಆದರ್ಶ ವಿದ್ಯಾಲಯದ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಫೆ. 28 ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 5ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಡಿಡಿಡಿ.ಠ್ಚಟಟ್ಝ ಛಿಛ್ಠ್ಚಠಿಜಿಟ್ಞ. ಚ್ಟ.್ಞಜ್ಚಿ.ಜ್ಞಿ/ಡಿಡಿಡಿ.ಜಿಜ್ಞಿಜಿ.ಚ್ಟ್ಞಠಿ.ಜಟ.ಜ್ಞಿಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಡಿಡಿಪಿಐ ಆಡಳಿತ/ಅಭಿವೃದ್ಧಿ, ಬಿಇಒ/ಬಿಆರ್‌ಸಿ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕು, ಮುಖ್ಯ ಶಿಕ್ಷಕರು, ಆದರ್ಶ ವಿದ್ಯಾಲಯ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕು ಇವರನ್ನು ಸಂಪರ್ಕಿಸಬಹುದೆಂದು ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ತಿಳಿಸಿದ್ದಾರೆ.
-------------------------