ಜಿಲ್ಲೆ

ಆದರ್ಶ ಗ್ರಾಮದಿಂದಾಗಿ ವಿಶೇಷ ಸ್ಥಾನಮಾನ

ಅರಕೇರಾ: ಆದರ್ಶ ಗ್ರಾಮಕ್ಕೆ ಪೂರಕ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಆಲ್ಕೋಡ ಗ್ರಾಪಂ ಅಧ್ಯಕ್ಷ ಮಹೇಶ ನಾಯಕ ಹೇಳಿದರು.

ಆಲ್ಕೋಡ 2022-23ನೇ ಸಾಲಿನ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾದ ಹಿನ್ನಲೆ ಗ್ರಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. ಆಲ್ಕೋಡ ಗ್ರಾಮ ಪ್ರಧಾನಮಂತ್ರಿ ಆದರ್ಶ ಗ್ರಾಮ ಎಂದು ಆಯ್ಕೆಯಾಗಿರುವುದರಿಂದ ವಿಶೇಷ ಸ್ಥಾನಮಾನ ಸಿಕ್ಕಂತಾಗಿದೆ. ಗ್ರಾಮದಲ್ಲಿ ಮೂಲ ಸೌಕರ್ಯ ಒದಗಿಸಲು ಸಭೆ ಆಯೋಜಿಸಲಾಗಿದೆ. ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ನಿರೀಕ್ಷಿಸಲಾಗಿದೆ ಎಂದರು.

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ ಉಪ ನೋಡಲ್ ಅಧಿಕಾರಿ ಶರಣಪ್ಪ ಮಾತನಾಡಿ, ಎಸ್ಸಿ, ಎಸ್ಟಿ ಜನಾಂಗಕ್ಕೆ ಅತಿ ಅವಶ್ಯವಿರುವ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾ ಸಮಿತಿಗೆ ಸಲ್ಲಿಸಲಾಗುವುದು. ಆಯ್ಕೆಯಾದ ಕಾಮಗಾರಿಗಳು ಅನುಷ್ಠಾನಕ್ಕೆ ಬರುತ್ತವೆ ಎಂದರು.

ಪಿಡಿಒ ಮಂಜುನಾಥ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕ, ಚರಂಡಿ ಕಾಮಗಾರಿ, ವಿದ್ಯುತ್ ಕಂಬಗಳ ಅಳವಡಿಕೆ, ಸಿಸಿ ರಸ್ತೆ, ಶೌಚಗೃಹ, ಕಾಂಪೌಂಡ್, ಸೋಲಾರ್ ಅಳವಡಿಕೆ ಸೇರಿ ಅನೇಕ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯರಾದ ಲಕ್ಷ್ಮೀದೇವಿ, ದೇವಮ್ಮ, ಯಮುನಪ್ಪ, ನರಸಪ್ಪ, ಹನುಮಂತ, ರಂಗಣ್ಣ ದೊರೆ, ವೈದ್ಯಾಧಿಕಾರಿ ವಿಮಲಾ ಪಂಚಭಾವಿ, ನಾಗರಾಜ ಬಿ.ವಿ, ಮೌನೇಶ ಎ.ಎಂ., ಕಾಳಪ್ಪ ಆಲ್ಕೋಡ, ಅನಿತಾ, ಲಕ್ಷ್ಮೀ, ಮಹಾದೇವಿ, ಕೆ.ಮಂಜುನಾಥ, ಮಲ್ಲಣ್ಣ, ನಿಂಗಪ್ಪ ಪೂಜಾರಿ, ದೀಪಕ್, ರುದ್ರಗೌಡ, ಬಾಲಾಜಿ ನಾಯ್ಕ ಇದ್ದರು.