ಸಿರಿಗೇರಿ: ಗ್ರಾಮದ ವೀರಯೋಧ ಮಂಜುನಾಥ ಸ್ಮಾರಕ ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ವೈದ್ಯಾಧಿಕಾರಿ ಟಿ.ಎಂ.ಮೃತ್ಯುಂಜಯಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕ ಓಂಕಾರ್ ಗೌಡ ಮಾತನಾಡಿ, ದ್ವೇಷ, ಅಸೂಯೆ ಬದಿಗೊತ್ತಿ ಭಾರತೀಯರೆಲ್ಲರೂ ಒಗ್ಗಟ್ಟಾಗಿ ಉತ್ತಮ ಸಮಾಜ ಕಟ್ಟಲು ಶ್ರಮಿಸೋಣ ಎಂದರು. ನಿವೃತ್ತ ಶಿಕ್ಷಕರಾದ ಜೆ.ರಾಣಪ್ಪ, ನಿಜಾಮುದ್ದೀನ್, ವಿ.ಹನುಮೇಶ್, ರಂಜಿತ್ ಕುಮಾರ್, ವೀರೇಶ್, ಪ್ರಸನ್ನ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಮೂರ್ತಿ ಇದ್ದರು.