ಜಿಲ್ಲೆ

ಆತ್ಮಸ್ಥೈರ್ಯ ತುಂಬಿದ ಐಜಿ

Haveri

ಸವಣೂರ: ಸೀಲ್​ಡೌನ್​ಗೆ ಒಳಪಟ್ಟಿರುವ ಪಟ್ಟಣದ ಎಸ್​ಎಂ ಕೃಷ್ಣ ನಗರಕ್ಕೆ ಐಜಿ ಎಸ್. ರವಿ ಹಾಗೂ ತಂಡವು ಗುರುವಾರ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿ, ಸ್ಥಳೀಯ ನಿವಾಸಿಗಳಿಗೆ ಆತ್ಮಸ್ಥೈರ್ಯ ತುಂಬಿದರು.

ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಎಸ್​ಪಿ ಕೆ.ಜಿ. ದೇವರಾಜ್, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಡಿವೈಎಸ್​ಪಿ ಒ.ಬಿ. ಕಲ್ಲೇಶಪ್ಪ, ಸಿಪಿಐ ಜಿ.ಎಂ.ಶಶಿಧರ, ತಾ.ಪಂ ಎಡಿ ಎಸ್.ಎಚ್.ಅಮರಾಪೂರ ಹಾಗೂ ಇತರರು ಇದ್ದರು.

ಆಯುಷ್ ವೈದ್ಯರಿಂದ ತಪಾಸಣೆ: ಕರೊನಾ ಸೋಂಕು ಖಚಿತ ಪಟ್ಟ ನಂತರ ಪಟ್ಟಣದ ಜನರು ತಮ್ಮ ಆರೋಗ್ಯ ಕುರಿತು ಚಿಂತೆಗೀಡಾಗಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೋರಿಕೆಯ ಮೇರೆಗೆ ಜಿಲ್ಲಾ ಹಾಗೂ ತಾಲೂಕು ಆಯುಷ್ ವೈದ್ಯರ ಸಂಘದ ಪದಾಧಿಕಾರಿಗಳು ಗುರುವಾರ ಪಟ್ಟಣದ ಪ್ರತಿ ಮನೆಗೆ ತೆರಳಿ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ ಕೈಗೊಂಡರು. ಆಯುಷ್ ವೈದ್ಯರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಸುನೀಲ ಹಿರೇಮಠ, ತಾಲೂಕು ಅಧ್ಯಕ್ಷ ಡಾ. ಮಂಜುನಾಥ ಯತ್ನಳ್ಳಿ ಹಾಗೂ ಪದಾಧಿಕಾರಿಗಳು ಇದ್ದರು.

ಸುರಕ್ಷತೆ ಕ್ರಮ ಅನುಸರಿಸದ ಐಜಿ: ಐಜಿ ಎಸ್. ರವಿ ಹಾಗೂ ತಂಡದ ಸದಸ್ಯರು ಸವಣೂರಿಗೆ ಭೇಟಿ ನೀಡಿದ ವೇಳೆ ಸೋಂಕು ಪತ್ತೆಯಾಗಿರುವ ಎಸ್​ಎಂ ಕೃಷ್ಣ ನಗರದಲ್ಲಿ ಮಾಸ್ಕ್ ಬಿಟ್ಟರೇ ಇತರ ಯಾವುದೇ ಮುನ್ನಚ್ಚರಿಕೆಯ ಪಿಪಿಇ ಕಿಟ್, ಗ್ಲೌಸ್ ಧರಿಸದೇ ಕರೊನಾ ಸೋಂಕಿತ ವ್ಯಕ್ತಿಗಳ ಮನೆಯ ಬಳಿ ಹೋಗಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಸಾರ್ವಜನಿಕರು, ಪೌರ ಕಾರ್ವಿುಕರು ಸಾಕಷ್ಟು ಸುರಕ್ಷತಾ ಕ್ರಮ ಅನುಸರಿಸಿ ಇಲ್ಲಿ ಸಂಚರಿಸುತ್ತಾರೆ. ಇವರೇಕೆ ಸುರಕ್ಷಾತ ಕ್ರಮ ಅನುಸರಿಸಲಿಲ್ಲ ಎಂದು ಜನ ಮಾತನಾಡಿಕೊಂಡರು.