ಚಿತ್ರದುರ್ಗ: ಬೇನಾಮಿ ಭೂಮಿ ಖರೀದಿಸುವುದು,ತಮ್ಮದಲ್ಲದ ಭೂಮಿಗೆ ಪರಿಹಾರ ಪಡೆಯುವುದು ಆತ್ಮಸಾಕ್ಷಿ ನಡೆಯೇ ಎಂದು ಸಂಸದ ಗೋ ವಿಂದ ಎಂ.ಕಾರಜೋಳ ಅವರು,ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅ ವರು,ಕೋರ್ಟ್‌ನಲ್ಲಿ ಹಿನ್ನಡೆ ಆದ ದಿನದಂದೇ ಅವರು ರಾಜೀನಾಮೆ ಕೊಡಬೇಕಿತ್ತು. ಈಗಲಾದರೂ ಅವರು ತಮ್ಮ ಆತ್ಮಸಾಕ್ಷಿಗೆ ಅನು ಗುಣವಾಗಿಯೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕೆಂದು ಕಾರಜೋಳ ಸಿದ್ದರಾಮಯ್ಯರನ್ನು ಒತ್ತಾಯಿಸಿದರು.