ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಪ.ಪೂ. ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ೨೦೨೪-೨೫ ನೇ ಶೈಕ್ಷಣಿಕ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಕಂದಾಯ ಇಲಾಖೆ ತಹಸೀಲ್ದಾರ ಡಾ.ಚಿಕ್ಕಪ್ಪ ನಾಯಕ ಉದ್ಘಾಟಿಸಿದರು. ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಸ್.ಎಂ.ಗಾಂವಕರ, ಬಸವೇಶ್ವರ ವಿಜ್ಞಾನ ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಎಚ್.ಬೇವಿನಹಳ್ಳಿ, ಡಾ.ಆರ್.ಗಿರೀಶ್, ಪ್ರತಿಭಾ ಬಿ.ಕಟ್ಟಿಮನಿ, ಜಿ.ಎಚ್.ಜಿಗಳೂರು,ಬಸವರಾಜ ಎಂ ಸೋನಕನಾಳ ಇದ್ದರು. 
ಜಿಲ್ಲೆ

ಆತ್ಮವಿಶ್ವಾಸವಿದಲ್ಲಿ ಯಶಸ್ಸು

ಬಾಗಲಕೋಟೆ: ವಿದ್ಯಾರ್ಥಿಗಳು ಕಷ್ಟಗಳಿಗೆ ಹೆದರದೇ ತಮ್ಮಲ್ಲಿರುವ ಪ್ರತಿಭೆ, ಆಸಕ್ತಿ ಬೆಳಿಸಿಕೊಂಡು ಆತ್ಮ ವಿಶ್ವಾಸದಿಂದ ಸಾಗಿದಲ್ಲಿ ಯಶಸ್ಸು ನಿಮ್ಮದಾಗುತ್ತದೆ ಎಂದು ಕಂದಾಯ ಇಲಾಖೆ ತಹಸೀಲ್ದಾರ ಡಾ.ಚಿಕ್ಕಪ್ಪ ನಾಯಕ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಪ.ಪೂ. ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ೨೦೨೪-೨೫ ನೇ ಶೈಕ್ಷಣಿಕ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರೀಕ್ಷೆಗಳು ಭಯದ ವಾತಾವರಣ ನಿರ್ಮಿಸಬಾರದು. ಅದು ಒಂದು ಸಂಭ್ರಮವಾಗಲಿ, ಮಾನವೀಯ ಮೌಲ್ಯಗಳೊಂದಿಗೆ ಬೆಸೆಯಲು ಕಲಿಯಿರಿ. ಆಧುನಿಕ ಯುಗದಲ್ಲಿ ನೈತಿಕ ಮತ್ತು ಸಾಮಾಜಿಕ ಜಾಲತಾಣಗಳ ಬಗ್ಗೆ ಆಧ್ಯಾತ್ಮಿಕ ಶಿಕ್ಷಣ ಅತ್ಯಂತ ಮಹತ್ವ ಪೂರ್ಣವಾಗಿದೆ ಎಂದರು.
ವಿದ್ಯಾರ್ಥಿಗಳು ಆಧ್ಯಾತ್ಮಿಕ ಶಿಕ್ಷಣ ಬೆಳೆಸಿಕೊಳ್ಳಬೇಕು. ಆತ್ಮ ವಿಶ್ವಾಸದಿಂದ ವಿದ್ಯಾರ್ಥಿಗಳಲ್ಲಿ ಯಶಸ್ಸು ಸಾಧ್ಯ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಂದಿಲ್ಲೊಂದು ವಿಶಿಷ್ಟವಾದ ಪ್ರತಿಭೆ ಇದ್ದೆ ಇರುತ್ತದೆ. ತಮ್ಮಲಿರುವ ಶಕ್ತಿ, ಸಾಮರ್ಥ್ಯ,ಜ್ಞಾನ ಬೆಳೆಸಿಕೊಂಡು ಅಗಾಧ ಸಾಧನೆ ಮಾಡಬಹುದು ಕಠಿಣ ಪರಿಶ್ರಮ ನಮ್ಮನ್ನು ಅತ್ಯುನ್ನತ ಸ್ಥಾನ ಅಲಂಕರಿಸುವಂತೆ ಮಾಡುತ್ತದೆ ಎಂದು ಹೇಳಿದರು.

ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಸ್.ಎಂ.ಗಾಂವಕರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಽಸಿಯೇ ತೀರುತ್ತೇನೆಂಬ ಗುರಿಯಿರಬೇಕು. ಕಾರ್ಯ ಶ್ರದ್ಧೆ ನಮ್ಮನ್ನು ನಿರಂತರವಾಗಿ ಎಚ್ಚರಿಸುವಂತಿರಬೇಕು. ಮುಂದೆ ಬರುವ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಆದರ್ಶವಾಗಿರಬೇಕು. ಕಲಿತ ಕಾಲೇಜು, ಸಂಘ ಶಿಕ್ಷಕರನ್ನು ಯಾವತ್ತು ಮರಿಯಬಾರದು. ಸಾಧನೆ ಗೈದು ಉತ್ತಮ ವಿದ್ಯಾರ್ಥಿಗಳಾಗಿ ನೈತಿಕ ಗುಣಗಳನ್ನು ಇಟ್ಟುಕೊಂಡು ಪಾಲಕರನ್ನು ನೋಡಿಕೊಳ್ಳಿ ಎಂದು ಕ್ರೀಡೆ ಹಾಗೂ ಸಾಂಸ್ಕೃತಿಕವಾದ ಚಟುವಟಿಕೆಗಳು ಮನುಷ್ಯನ್ನು ಸದೃಢನನ್ನಾಗಿಸುತ್ತದೆ ಎಂದು ಹೇಳಿದರು.

ಅತೀ ಹೆಚ್ಚು ಅಂಕ ಪಡೆದ ತಸ್ಕೀನ್ ಶಿರೋಳಕರ. ಸುಚಿತ್ರಾ ಭೂತಪ್ಪನ್ನವರ ಅವರನ್ನು ಸನ್ಮಾನಿಸಲಾಯಿತು. ಬಸವೇಶ್ವರ ವಿಜ್ಞಾನ ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಎಚ್.ಬೇವಿನಹಳ್ಳಿ ಸ್ವಾಗತಿಸಿದರು. ಡಾ.ಆರ್.ಗಿರೀಶ ಪರಿಚಯಿಸಿದರು. ಪ್ರತಿಭಾ ಬಿ.ಕಟ್ಟಿಮನಿ ವಂದಿಸಿದರು. ಜಿ.ಎಚ್.ಜಿಗಳೂರು ಹಾಗೂ ಬಸವರಾಜ ಎಂ. ಸೋನಕನಾಳ ನಿರೂಪಿಸಿದರು.