ಚಿಕ್ಕಮಗಳೂರು: ಜೀವನದ ಒಂದು ಭಾಗವಾಗಿ ಆತ್ಮವಿಶ್ವಾಸದ ಜೊತೆಗೆ ಗೌರವ ಹೆಚ್ಚಿಸುವುದೇ ಸಂಸ್ಕೃತಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಬುಧವಾರ ನಗರದ ಮಹಿಳಾ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಜಾನಪದ ಉತ್ಸವ-೨೦೨೫ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈವಿಧ್ಯಮಯ ಜೀವನದ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊAಡು ಭಾರತದ ಸಂಸ್ಕಾರ ಇಡೀ ವಿಶ್ವದಲ್ಲಿ ದೊಡ್ಡ ಪಾತ್ರ ವಹಿಸಿ ಮಾದರಿಯಾಗಿದೆ. ನಾವು ಸಾಂಪ್ರದಾಯಿಕವಾಗಿ ಆಚರಿಸುವ ಪ್ರತಿಯೊಂದು ಹಬ್ಬಗಳು ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಿವೆ. ಭಾರತದಂಥ ಜಾತ್ಯಾತೀತ ರಾಷ್ಟçದಲ್ಲಿ ವಿವಿಧ ಧರ್ಮಗಳ ಸಮುದಾಯದವರು ಆಚರಿಸುವ ಹಬ್ಬಗಳು ಜೊತೆಗೆ ರಾಷ್ಟಿçÃಯ ಹಬ್ಬಗಳನ್ನು ಆಚರಿಸುವ ರೀತಿ ಸಂಸ್ಕೃತಿಯನ್ನು ಬಿಂಬಿಸುತ್ತಿವೆ ಎಂದು ತಿಳಿಸಿದರು.
ರೈತರ ಜೀವನಾಡಿಯಾಗಿರುವ ಭತ್ತ, ರಾಗಿ, ಏಲಕ್ಕಿ, ಅಡಕೆ, ಕಾಫಿ, ತೆಂಗು, ಮೆಣಸು ಜೋಡಿಸಿ ಸಿಂಗರಿಸಿರುವುದರ ಜೊತೆಗೆ ಕಾಲೇಜಿನ ಆವರಣದಲ್ಲಿ ವಿವಿಧ ರೀತಿಯ ಚಿತ್ರಾಕಾರದ ರಂಗೋಲಿಯನ್ನು ಬಿಡಿಸಿ ಕಂಗೊಳಿಸುವAತೆ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೂರ್ವಜರು ಬಳಸುತ್ತಿದ್ದ ಸೇರು, ಪಾವು, ಚವೆ ಮಣಿ, ಬುಗುರಿ, ಕಡಗೋಲು ಮುಂತಾದ ಎಲ್ಲ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿರುವುದು ಆಧುನಿಕ ಜಗತ್ತಿಗೆ ಪರಿಚಯಿಸಲು ಸಹಕಾರಿಯಾಗಿರುವುದರ ಜೊತೆಗೆ ಜಾನಪದ ಉತ್ಸವಕ್ಕೆ ಮೆರಗು ನೀಡಿದೆ ಎಂದು ಹೇಳಿದರು.
ರಾಷ್ಟçಕವಿ ಕುವೆಂಪು ಜನಿಸಿದ ಕವಿಶೈಲಕ್ಕೆ ವಿದ್ಯಾರ್ಥಿಗಳು ಹೋಗಲು ವಾಹನ ವ್ಯವಸ್ಥೆ ಮಾಡಲು ಭರವಸೆ ನೀಡಿದ ಅವರು, ಕುವೆಂಪು ಅವರ ಮನೆ ಮುಂದೆ ಬರೆದಿರುವ ಮನೆಮನೆ ನಾನು ಹುಟ್ಟಿದ ಮನೆ, ಮನೆಮನೆ ನಾನು ಆಡಿ ಬೆಳೆದ ಮನೆ, ನಡೆದಾಡುವಾಗ ಎತ್ತಿ ಬೆಳೆಸಿದ ಮನೆ, ಬುಗುರಿ, ಗೋಲಿ ಆಡಿದ ಮನೆ ಎಂದು ವರ್ಣಿಸಲಾಗಿದೆ ಎಂದು ಬಣ್ಣಿಸಿದರು.
ಜಾನಪದ ಸೊಗಡು, ಜಾನಪದ ಗೀತೆ, ಜಾನಪದ ಆಟಗಳು ಸರಳವಾದ ಕೆಲಸದ ಸಮಯದಲ್ಲಿ ತಾಯಂದಿರ ಬಾಯಿಂದ ಬಂದ ನುಡಿಮುತ್ತುಗಳು ಎಂದ ಶಾಸಕರು, ಕಬ್ಬಡ್ಡಿ, ಲಗೋರಿ, ಕುಂಟೆಬಿಲ್ಲೆ, ಖೋಖೋ, ಕೂಸುಮರಿ ಮುಂತಾದ ಆಟಗಳು ಭಾರತದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದು ಹೇಳಿದರು.
ಮೊದಲು ತಾವು ಜನಿಸಿದ ಧರ್ಮವನ್ನು ಗೌರವಿಸಬೇಕು. ಇದರೊಂದಿಗೆ ಇನ್ನೊಂದು ಸಮುದಾಯದ ಧರ್ಮವನ್ನು ದ್ವೇಷ ಮಾಡದೇ ಇರುವುದು ಅಷ್ಟೇ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಕೆ.ದಾಮೋದರ್‌ಗೌಡ ವಹಿಸಿದ್ದರು. ನಗರಸಭೆ ಸದಸ್ಯ ಶಾದಬ್ ಆಲಂಖಾನ್, ಪ್ರಮುಖರಾದ ಮಹೇಶ್ವರಪ್ಪ, ಮೂಡಲಗಿರಿಯಪ್ಪ, ಡಾ. ಶ್ರೀನಿವಾಸ್, ಹೇಮಾ ಮಾಲಿನಿ, ದೀಕ್ಷಿತ್ ಕುಮಾರ್ ಮತ್ತಿತರರಿದ್ದರು. ಕಾರ್ಯಕ್ರಮಕ್ಕಾಗಿ ಹಂಪಾಪುರದಿAದ ಎತ್ತಿನ ಗಾಡಿಯನ್ನು ನಿಖಿಲ್ ಸಹೋದರರು ತಂದಿದ್ದು ವಿಶೇಷವಾಗಿತ್ತು.