ಬಾಗಲಕೋಟೆ: ಹಿಂದುಳಿದ ಜನ ಆತ್ಮಗೌರವದಿಂದ ಬದಕುವ ಪರಿವರ್ತನೆ ತಂದಿದ್ದು ಡಾ.ಬಿ.ಆರ.ಅಂಬೇಡ್ಕರ್ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಮಠ ಹೇಳಿದರು.
ಅವರು ನಗರದ ಶಿವಾನಂದ ಜಿನ್ ನಲ್ಲಿರುವ ಬಿಜೆಪಿ ಕಾರ್ಯಾಲದಲ್ಲಿ ಭಾರತೀಯ ಜನತಾ ಪಕ್ಷ ದ ನಗರ ಮಂಡಲ ವತಿಯಿಂದ ಹಮ್ಮಿಕೊಂಡ ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.
ಭಾರತೀಯ ಸಂವಿಧಾನ ರಚನೆಯ ಮೂಲಕ ದೇಶದ ಎಲ್ಲ ವರ್ಗಗಳ ಜನರಿಗೂ ಸಮ ಪಾಲು ಸಮ ಬಾಳು ನೀಡಿದವರು ಡಾ.ಬಿ.ಆರ್,ಅಂಬೆಡ್ಕರರು, ಅವರು ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಹೋರಾಡಿದ ಮಹಾನಾಯಕರಾದವರು, ಅವರು ಹಿಂದುಳಿದ ಜನರಲ್ಲಿ ಸಮಾನತಯೆ ವಿಶ್ವಾಸ ತುಂಬಿ ಆತ್ಮಗೌರವದಿಂದ ಬದುಕುವ ಪರಿವರ್ತನೆ ತಂದಿದ್ದಾರೆ ಎಂದರು.
ಬೆಳಗಾವಿ ವಿಬಾಗಿಯ ಸಹ ಪ್ರಬಾರಿ ಬಸವರಾಜ ಯಂಕಂಚಿ ಮಾತನಾಡಿ ಡಾ.ಬಿ.ಆರ್. ಅಂಬೆಡ್ಕರರ ಜೀವನ ಆದರ್ಶ ಎಲ್ಲರಿಗೂ ಪ್ರೇರಣೆ ಎಂದರು. ಶಿವಾನಂದ ಟವಳಿ ಮಾತನಾಡಿ ಅಂಬೆಡ್ಕರ ಅವರ ಜೀವನ ನಡೆದು ಬಂದ ದಾರಿಯ ಬಗ್ಗೆಇ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತ ಮಾಜಿ ಸದಸ್ಯ ನಾರಾಯಣಸಾ ಬಾಂಡಗೆ, ಡಾ.ಎಂ.ಎಸ್.ದಡ್ಡೆನ್ನವರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಿ ನಾಯ್ಕರ,ನಗರಮಂಡಲ ಅಧ್ಯಕ್ಷ ಸದಾನಂದ ನಾರಾ. ನಗರಸಭೆ ಸದಸ್ಯೆ ಜ್ಯೋತಿ ಭಜಂತ್ರಿ, ಯಲ್ಲಪ್ಪ ನಾರಾಯಣಿ,ಬಸವರಾಜ ಅವರಾದಿ,ನಾಗರಾಜ ಕಟ್ಟಿಮನಿ,ಸಾಗರ ಬಂಡಿ,ಕಾಂತು ಕಾಥೆದಾರ್,ನಾಗರಾಜ ನಾರಾಯಣಕರ ಸೇರಿದಂತೆ ಅನೆಕರು ಉಪಸ್ಥಿತರಿದ್ದರು.