ಕಲಬುರಗಿ: ಸಾಧನೆಗೆ ಆತ್ಮವಿಶ್ವಾಸ ಮೆಟ್ಟಿಲಾಗಿದ್ದು, ಗುರಿ ತಲುಪಲು ಏನೇ ಅಡ್ಡಿ ಇದ್ದರೂ ಎದುರಿಸಿ, ಮೆಟ್ಟಿ ನಿಲ್ಲುವ ವಿಶ್ವಾಸ ಇದ್ದರೆ ಯಶಸ್ಸು ದೊರೆಯುತ್ತದೆ ಎಂದು ಹೈದರಾಬಾದ್ ಕರ್ನಾಟಕ ಶಿP್ಷÀಣ ಸಂಸ್ಥೆ ಉಪಾಧ್ಯಕ್ಷ ರಾಜಾ ಭೀಮಳ್ಳಿ ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾತೋಶ್ರೀ ತಾರಾದೇವಿ ರಾಂಪೂರೆ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಹೆಟೆರೋ ಲ್ಯಾಬ್ ವೇಮಗಲ್‌ನಿಂದ ಶನಿವಾರ ಆಯೋಜಿಸಿದ್ದ ಕ್ಯಾಂಪಸ್ ಸಂದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಔಷಧ ವಿಜ್ಞಾನ ಕ್ಷೇತ್ರದಲ್ಲಿ ಉದ್ಯೋಗಗಳಿಗೆ ಅಪಾರ ಅವಕಾಶವಿದೆ. ಫಾರ್ಮಸಿ ಇದೀಗ ಉದಯಿಸುತ್ತಿರುವ ಸೂರ್ಯನ ಹಾಗೆ ಕೆಲಸ ಮಾಡುತ್ತಿದೆ. ಫಾರ್ಮಸಿ ಕ್ಷೇತ್ರದಲ್ಲಿ ಅಭ್ಯಾಸ ಮಾಡಿದ ಪ್ರತಿ ವಿದ್ಯಾರ್ಥಿಗಳಿಗೆ ಅವಕಾಶ ಹುಡುಕಿ ಬರುತ್ತವೆ ಎಂದರು.
ಆಡಳಿತ ಮಂಡಳಿ ಸದಸ್ಯ ಡಾ.ಮಹಾದೇವಪ್ಪ ರಾಂಪೂರೆ ಮಾತನಾಡಿ, ಚಿಂತಿಸುವುದು ಬಿಟ್ಟು ಚಿಂತನೆಯಲ್ಲಿ ತೊಡಗಿದರೆ ಫಲ ದೊರೆಯುತ್ತದೆ. ಪ್ರಶ್ನಿಸುವ ಮನೋಭಾವ ಬೆಳೆಸಿ ಪ್ರಯತ್ನಶೀಲರಾಗಬೇಕು ಎಂದರು.
ಕಾರ್ಯದರ್ಶಿಗಳಾದ ಉದಯಕುಮಾರ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯರಾದ ಅನೀಲಕುಮಾರ ಮರಗೋಳ, ನಾಗಣ್ಣ ಘಂಟಿ, ಲ್ಯಾಬ್ ಎಚ್‌ಆರ್ ಶಿವಕುಮಾರ, ಮುಖ್ಯಸ್ಥ ಚೈತನ್ಯ, ನಿರ್ದೇಶಕ ಅಶೋಕ ಪಸ್ತಾಪೂರ, ಪ್ರಾಚಾರ್ಯ ಡಾ.ಪ್ರಕಾಶ ಸರಸಂಬಿ, ಉಪಪ್ರಾಚಾರ್ಯ ಡಾ.ಎಸ್.ಲಿಂಗರಾಜ ಡೆಂಕಿ ಇತರರಿದ್ದರು. ಬಸವರಾಜ ಬೆಂಡಗುAಬಳಿ ನಿರೂಪಣೆ ಮಾಡಿದರು.