ಜಿಲ್ಲೆ

ಆತಂಕದಲ್ಲೇ ವಿದ್ಯಾರ್ಥಿಗಳ ಓಡಾಟ

ಜೊಯಿಡಾ: ನಾಗೋಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಗೇಲಿಯಲ್ಲಿ ವಿದ್ಯುತ್ ಕಂಬಗಳು ಮುರಿದ ಪರಿಣಾಮ ಶಾಲೆಯ ಮುಂದಿನ ಆವರಣದಲ್ಲಿ ವಿದ್ಯುತ್ ತಂತಿ ಜೋತು ಬಿದ್ದಿವೆ. ಇದರಿಂದ ಶಾಲಾ ಮಕ್ಕಳು ಆತಂಕದಲ್ಲೇ ಓಡಾಡುವಂತಾಗಿದೆ.

ಕಳೆದ ವರ್ಷ ಭಾರಿ ಮಳೆಗೆ ಮರಗಳು ಬಿದ್ದ ಕಾರಣ ಇಲ್ಲಿನ ಟ್ರಾನ್ಸ್​ಫಾರ್ಮರ್ ಕಂಬಗಳು ಹಾಗೂ ಇತರೆ 5 ಕಂಬಗಳು ಮುರಿದಿವೆ. ಸ್ಥಳೀಯರೇ ಈ ವಿದ್ಯುತ್ ಕಂಬಗಳಿಗೆ ಮರದ ಎಳೆಗಳ ಆಸರೆ ನೀಡಿ ಬೀಳದಂತೆ ನಿಲ್ಲಿಸಿದ್ದಾರೆ. 7 ತಿಂಗಳಿಂದ ಇಲ್ಲಿನ ವಿದ್ಯುತ್ ಟ್ರಾನ್ಸ್​ಫಾರ್ಮರ್ ಹೊಂದಿರುವ ಕಂಬಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಶಾಲೆ ಮಕ್ಕಳು ಇಲ್ಲೇ ಓಡಾಡುವುದರಿಂದ ಯಾವಾಗ ಅನಾಹುತ ಸಂಭವಿಸುತ್ತದೋ ಎಂಬ ಆತಂಕ ಪಾಲಕರು ಹಾಗೂ ಶಿಕ್ಷಕರಿಗೆ ಕಾಡುತ್ತಿದೆ. ಕೂಡಲೆ ಇದನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಏಳು ತಿಂಗಳಿಂದ ವಿದ್ಯುತ್ ಕಂಬಗಳು ಮುರಿದು ಬೀಳುವ ಹಂತದಲ್ಲಿಯೇ ಇವೆ. ವಿದ್ಯುತ್ ಕಂಬ ಬೀಳದಂತೆ ಮರದ ಕಂಬಗಳನ್ನು ಕಟ್ಟಿ ನಿಲ್ಲಿಸಿದ್ದೇವೆ. ಅವಘಡ ಸಂಭವಿಸುವ ಮುನ್ನ ಹೊಸ ಕಂಬ ಅಳವಡಿಸಬೇಕು.| ದೇವಿದಾಸ ವೇಳಿಪ ನಾಗೋಡಾ ಗ್ರಾ.ಪಂ.ಸದಸ್ಯ
ವಾಗೇಲಿಯಲ್ಲಿ ವಿದ್ಯುತ್ ಕಂಬಗಳು ಮುರಿದಿರುವುದು ಗಮನಕ್ಕೆ ಬಂದಿದೆ. ಎರಡು ದಿನದಲ್ಲಿ ಸಮಸ್ಯೆ ಪರಿಹರಿಸಲಾಗುವುದು. | ಪುರುಷೋತ್ತಮ ಮಲ್ಯ ಹೆಸ್ಕಾಂ ಎಇಇ ದಾಂಡೇಲಿ