ಜಿಲ್ಲೆ

ಆತಂಕ ಮೂಡಿಸಿದ ಅತಿಥಿ ಉಪನ್ಯಾಸಕನ ಪತ್ರ

ಆತಂಕ ಮೂಡಿಸಿದ ಅತಿಥಿ ಉಪನ್ಯಾಸಕನ ಪತ್ರ

|ಪತ್ರ ಬರೆದು ನಾಪತ್ತೆ

|

ವಿಜಯವಾಣಿ ಸುದ್ದಿ ಚಿಕ್ಕೋಡಿ:

ನನ್ನ ಸಾವಿಗೆ ಕರ್ನಾಟಕ ಸರ್ಕಾರ, ಮುಖ್ಯಮಂತ್ರಿ,‌ ಉನ್ನತ ಶಿಕ್ಷಣ ಸಚಿವರೇ ಕಾರಣ ಎಂದು ಪತ್ರ ಬರೆದು ಅತಿಥಿ ಉಪನ್ಯಾಸಕನೊರ್ವ ನಾಪತ್ತೆಯಾಗಿರುವ ಘಟನೆ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ನಡೆದಿದೆ.

ಬೆಳಕೂಡ ಗ್ರಾಮದ ನಿವಾಸಿ ಅತಿಥಿ ಉಪನ್ಯಾಸಕ ನೇಮಿನಾಥ ತಪಕೀರೆ(೩೮) ನಾಪತ್ತೆಯಾಗಿರುವ ಉಪನ್ಯಾಸ.ಈತ ಸೆ.29 ರಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾನೆ.ಈ ಹಿಂದೆಯು ಇದೇ ರೀತಿ ಪತ್ರ ಬರೆದು ನಾಪತ್ತೆಯಾಗಿ ಮತ್ತೆ ಮನೆಗೆ ಮರಳಿದ್ದ.ಮನೆಯಿಂದ ಹೊರಹೋದ ನಂತರ ಉಪನ್ಯಾಸಕ ನೇಮಿನಾಥನ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.

ಪತ್ರದಲ್ಲಿ ಏನಿದೆ?

ಕಳೆದ ೮ ವರ್ಷದಿಂದ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವ ನೇಮಿನಾಥ ತಪಕೀರೆ

ಸರ್ಕಾರದಿಂದ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ಇಲ್ಲ,ಅತಿಥಿ ಉಪನ್ಯಾಸಕ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲ ,ನನ್ನ ಸಾವಿನಿಂದ ಅತಿಥಿ ಉಪನ್ಯಾಸಕರ ಹೋರಾಟ ತೀವ್ರವಾಗಲಿ ಎಂದು ಪತ್ರದಲ್ಲಿ ಉಲೇಖಿಸಿದ್ದಾರೆ.

ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಪೊಲೀಸ್ ರಿಂದ ಶೋಧ ಕಾರ್ಯ ಮುಂದುವರೆದಿದೆ.