ಜಿಲ್ಲೆ

ಆತಂಕ ಇನ್ನೂ ದೂರವಾಗಿಲ್ಲ

ಶಿರಹಟ್ಟಿ: ಮಹಾಮಾರಿ ಕರೊನಾ ಜನರ ಬದುಕನ್ನು ತಲ್ಲಣಿಸುವಂತೆ ಮಾಡಿದೆ. ಜನರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಕೈಗೊಂಡ ಕಾರ್ಯ ಸ್ತುತ್ಯಾರ್ಹವಾಗಿದೆ. ಆತಂಕ ಇನ್ನೂ ದೂರವಾಗಿಲ್ಲ. ನಾಡಿನ ಜನತೆ ಲಾಕ್​ಡೌನ್ ನಿಯಮ ಪಾಲಿಸಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಫಕೀರಸಿದ್ಧರಾಮ ಶ್ರೀಗಳು ಭಕ್ತರಿಗೆ ಸಲಹೆ ನೀಡಿದರು.

ಶುಕ್ರವಾರ ಮಠದಲ್ಲಿ ಮಠದ ಸಂಪ್ರದಾಯದಂತೆ ಸಾಂಕೇತಿಕ ಪೂಜೆ ನೆರವೇರಿಸಿ ಮಾತನಾಡಿದ ಶ್ರೀಗಳು, ಈ ವರ್ಷ ಮಠದ ಜಾತ್ರೆ ರದ್ದಾಗಿದ್ದರಿಂದ ಭಕ್ತರ ಮನಸ್ಸಿಗೆ ನೋವಾಗಿದೆ. ಎಲ್ಲವೂ ದೈವಿಚ್ಛೆ. ಈ ವರ್ಷ ಚೆನ್ನಾಗಿ ಮಳೆ-ಬೆಳೆ ಚೆನ್ನಾಗಿ ಆಗಿ, ಭಕ್ತರ ಮನೆ-ಮನ ತುಂಬುವಂತಾಗಲಿ ಎಂದು ಹಾರೈಸಿದರು.

ಮಠಕ್ಕೆ ಕಿರುರಥ ಕಾಣಿಕೆ

ಈ ಬಾರಿ ಜಾತ್ರೋತ್ಸವ ರದ್ದಾದ ಸಂಗತಿ ತಿಳಿಯುತ್ತಿದ್ದಂತೆ ಮಠದ ಭಕ್ತರಾದ ಕುಂದಕೋಳ ತಾಲೂಕು ಮಳಲಿ ಗ್ರಾಮದ ಶಿಲ್ಪಿ ಮುರಲಿಧರ ಬಡಿಗೇರ ಕೇವಲ 15 ದಿನಗಳಲ್ಲಿ ಸಾಗವಾನಿ ಕಟ್ಟಿಗೆ ಬಳಸಿ ಸಿದ್ಧಪಡಿಸಿದ ರಥವನ್ನು ಶಿರಹಟ್ಟಿ ಮಠಕ್ಕೆ ಭಕ್ತಿ ಕಾಣಿಕೆಯಾಗಿ ನೀಡಿದ್ದಾರೆ.

EndFragment