ಬಾಗಲಕೋಟೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರಾದ ಬಸವರಾಜ ಅವರಾದಿ, ಸಾಗರ ಬಂಡಿ, ಶಶಿಕಲಾ ಮಜ್ಜಗಿ, ಸ್ಮೀತಾ ಪವಾರ ಹಾಗೂ ಕಾಂಗ್ರೆಸ್ ಸದಸ್ಯ ಚನ್ನವೀರ ಅಂಗಡಿ ನಡುವೆ ನಡೆದ ವಾಕ್ಸಮರದ ದೃಶ್ಯ.  
ಜಿಲ್ಲೆ

ಆಡಳಿತದಲ್ಲಿ ಹಸ್ತಕ್ಷೇಪಕ್ಕೆ ಕೈ-ಕಮಲ ಜಟಾಪಟಿ...!!

ಬಾಗಲಕೋಟೆ: ನಗರಸಭೆಗೆ ಆಡಳಿತ ಮಂಡಳಿ ಇದೆ. ಜನರಿಂದ ಆಯ್ಕೆಯಾದ ಸದಸ್ಯರು, ಶಾಸಕರು ಇದ್ದಾರೆ. ಜನರಿಗೋಸ್ಕರ ಮಾಡಬೇಕಾದ ಕೆಲಸಗಳನ್ನು ಸದಸ್ಯರು ಅಽಕಾರಿಗಳಿಂದ ಮಾಡಿಸುತ್ತಾರೆ. ಆದರೇ ಬಾಗಲಕೋಟೆ ನಗರಸಭೆಯಲ್ಲಿ ಖಾಸಗಿ ವ್ಯಕ್ತಿ ತಮ್ಮ ಹಸ್ತಕ್ಷೇಪ ಮಾಡುತ್ತಿದ್ದು, ಅವರು ಹೇಳಿದಂತೆ ಅಽಕಾರಿಗಳು ಮಣೆ ಹಾಕುತ್ತಿದ್ದಾರೆಂದು ಆರೋಪಿಸಿದ ಬಿಜೆಪಿ ಸದಸ್ಯರು, ಇದು ಮುಂದುವರೆದರೆ ನಗರಸಭೆ ಕಚೇರಿಗೆ ಕೀಲಿ ಜಡಿಯುವ ಎಚ್ಚರಿಕೆಯನ್ನು ನೀಡಿದರು.

ಇಲ್ಲಿನ ನಗರಸಭೆ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ನಗರಸಭೆ ಅಽಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯವಾರಿ ಶಾಸಕ ಎಚ್.ವೈ.ಮೇಟಿ ಅವರ ಆಪ್ತರಾಗಿರುವ ಹೊಳಬಸು ಶೆಟ್ಟರ ಅವರು ತೀವ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರೇನು ಶಾಸಕರಾ? ನಗರಸಭೆ ಸದಸ್ಯರಾ ಎಂದು ಖಾರವಾಗಿ ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿದಿದ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಅಽಕಾರಿಗಳು ಎಚ್ಚರದಿಂದ ಕೆಲಸ ಮಾಡಬೇಕು. ಅಪರಾಧವಾಗುವ ಕೆಲಸ ಮಾಡಬಾರದು. ಜನರಿಂದ ಆಯ್ಕೆಯಾಗುವ ಸದಸ್ಯರ ಕೆಲಸಗಳಿಗೆ ಆದ್ಯತೆ ನೀಡಬೇಕು ಅಂತ ಚಾಟಿ ಬೀಸಿದರು.

ಬಿಜೆಪಿ ಸದಸ್ಯರ ಮಾತಿಗೆ ಕೆರಳಿದ ಕಾಂಗ್ರೆಸ್ ಸದಸ್ಯರು, ಬಿಜೆಪಿ ಸದಸ್ಯರ ಆರೋಪ ನಿರಾದಾರ, ಹೊಳಬಸು ಶೆಟ್ಟರ ಅವರು ಶಾಸಕರ ಪಿ.ಎ.ಇದ್ದಾರೆ. ಅವರು ಸಾರ್ವಜನಿಕರ ಕೆಲಸ ಹೇಳಿದ್ದಾರೆ. ಇಲ್ಲಿ ವೈಯಕ್ತಿಕವಾಗಿ ಅವರೇನು ಹಸ್ತಕ್ಷೇಪ ಮಾಡಿಲ್ಲ. ಬಿಜೆಪಿ ಸದಸ್ಯರು ಸುಖಾಸುಮ್ಮನೆ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ತಿರುಗೇಟು ನೀಡಿದರು. ಈ ವಿಷಯ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೇ ವಾಕ್ಸಮರಕ್ಕೆ ಕಾರವಾಯಿತು. ಸಭೆಯಲ್ಲಿ ಪರಸ್ಪರ ಮಾತಿನ ಎದರೇಟು ನಡೆದವು.

ಸದಸ್ಯೆ ಸ್ಮೀತಾ ಪವಾರ ಮಾತನಾಡಿ, ಯಾವುದಾದರು ಕೆಲಸ ಹೇಳಲು ಹೋದರೆ ಇಲ್ಲಿನ ಅಽಕಾರಿಗಳು ಹೊಳಬಸು ಶೆಟ್ಟರ ಹೆಸರು ಹೇಳುತ್ತಾರೆ. ಜನರಿಂದ ಆಯ್ಕೆಯಾದ ನಮ್ಮ ಕೆಲಸಗಳನ್ನು ಮಾಡುತ್ತಿಲ್ಲ. ಹೀಗೆ ಆದರೇ ಅನ್ಯಾಯ ಅಲ್ಲವೇ?. ಸಾರ್ವಜನಿಕರ ಕೆಲಸದಲ್ಲಿ ಸರ್ಕಾರಿ ಅಽಕಾರಿಗಳ ಮೇಲೆ ಖಾಸಗಿ ವ್ಯಕ್ತಿ ಹಸ್ತಕ್ಷೇಪ ಮಾಡುವುದು ತರವಲ್ಲ ಎಂದು ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸಾಗರ ಬಂಡಿ ಮಾತನಾಡಿ, ಬಾಗಲಕೋಟೆ ಮತಕ್ಷೇತ್ರಕ್ಕೆ ಸಂಬAಧವಿಲ್ಲದ ವ್ಯಕ್ತಿಗೆ ಅಽಕಾರಿಗಳು ಮನ್ನಣೆ ನೀಡುತ್ತಿದ್ದಾರೆ. ನವನಗರದ ಯೂನಿಟ್-೨ ಹಸ್ತಾಂತರವಾಗಿಲ್ಲ. ಆದರು ಸೆಕ್ಟರ್ ನಂಬರ್ ೭೨ ರಲ್ಲಿರುವ ಖಾಸಗಿ ಶಾಲೆಯ ಸ್ವಚ್ಛತೆಗಾಗಿ ನಗರಸಭೆ ಪೌರಕಾರ್ಮಿಕರನ್ನು ಮೂರು ದಿನಗಳ ಕಾಲ ಕೆಲಸಕ್ಕೆ ಕಳುಹಿಸಿದ್ದಾರೆ. ನಗರಸಭೆ ವ್ಯಾಪ್ತಿಯ ಅನೇಕ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಅಂತ ಹೇಳುವ ಪೌರಾಯುಕ್ತರು ಹಾಗೂ ಅಽಕಾರಿಗಳು, ನಗರಸಭೆಗೆ ಸಂಬAಧವೇ ಇಲ್ಲದಂತ ಬಿಟಿಡಿಎ ವ್ಯಾಪ್ತಿ ಪ್ರದೇಶದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯ ಆವರಣ ಸ್ವಚ್ಛಗೊಳಿಸಲು ಕಳುಹಿಸಿರುವುದು ತಪ್ಪು ಅಲ್ಲವೇ? ಕೂಡಲೇ ಅಽಕಾರಿಗಳು ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸದಸ್ಯ ಬಸವರಾಜ ಅವರಾದಿ ಮಾತನಾಡಿ, ಶಾಸಕರ ಪಿಎ ಅಂತ ಹೇಳುತ್ತೀರಿ. ಸರ್ಕಾರಿ, ಖಾಸಗಿ ಪಿಎ ಇದ್ದಾರಾ. ಪಿಎ ಇದ್ದವರು ಅಽಕಾರಿಗಳಿಗೆ ಸೂಚನೆ ನೀಡಬಹುದಾ ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಸದಸ್ಯರಾದ ಶಶಿಕಲಾ ಮಜ್ಜಗಿ, ಶ್ರೀನಿವಾಸ ಸಜ್ಜನ ಸೇರಿದಂತೆ ಅನೇಕರು ಧ್ವನಿಗೂಡಿಸಿದರು. ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ವಿರುದ್ಧ ಕಿಡಿಕಾರಿದರು. ಸರ್ಕಾರಿ ಕೆಲಸಕ್ಕೆ ಖಾಸಗಿ ವ್ಯಕ್ತಿಗಳ ಅವಕಾಶ ನೀಡಿದರೇ ನಗರಸಭೆಗೆ ಕೀಲಿ ಹಾಕಿ ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದರಿಂದ ಕೆಲ ಕಾಲ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು. ಎರಡು ಪಕ್ಷದ ಸದಸ್ಯರು ಪರ -ವಿರೋಧಗಳ ವಾಗ್ದಾಳಿ ನಡೆಸಿದರು. ಕೊನೆಗೆ ಆಯುಕ್ತ ಆರ್.ವಾಸಣ್ಣ ನಾನು ಇದನೆಲ್ಲ ಸಮಾಜಾಷಿಯಿಸುತ್ತೇನೆ ಅಂತ ತೆರೆ ಎಳೆದರು.

ವಿ.ಪ ಸದಸ್ಯ ಪಿ.ಎಚ್.ಪೂಜಾರ, ನಗರಸಭೆ ಅಽಕಾರಿಗಳು ಎಚ್ಚರಿದಿಂದ ಕೆಲಸ ಮಾಡಬೇಕು. ಖಾಸಗಿ ವ್ಯಕ್ತಿಗಳ ಮಾತು ಕೇಳುವುದು ಸರಿಯಲ್ಲ. ನಮ್ಮ ನಗರಸಭೆ ಸದಸ್ಯರ ಗೌರವಕ್ಕೆ ಧಕ್ಕೆ ತರುತ್ತೀದ್ದೀರಿ, ಅಽಕಾರಿಗಳು ಮಾಡುತ್ತಿರುವ ಕೆಲಸ ಅಕ್ಷಮ್ಯ ಅಪರಾಧ. ಕೂಡಲೇ ಆಯುಕ್ತರು ನೋಟಿಸ್ ನೀಡಬೇಕು. ಸಂಬ0ಧಪಟ್ಟ ಅಽಕಾರಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ವಿಷಯ ಗಂಭೀರವಾಗಲಿದೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಉಪಾಧ್ಯಕ್ಷೆ ಶೋಭಾರಾವ, ಸಭಾಪತಿ ಯಲ್ಲಪ್ಪ ನಾರಾಯಣಿ, ಸದಸ್ಯರಾದ ವಿ.ವಿ.ಶಿರಗನ್ನವರ, ನಾಗರತ್ನಾ ಹೆಬ್ಭಳ್ಳಿ ಇತರರು ಇದ್ದರು.