ಜಿಲ್ಲೆ

ಆಟೋಟಗಳಿಂದ ಆರೋಗ್ಯ ವೃದ್ಧಿ - ಮಹಾಂತೇಶ ಕೌಜಲಗಿ

ಧರ್ಮರಾಜ ರಾಮನಗೌಡ ಪಾಟೀಲ

ಮುರಗೋಡ: ವಿದ್ಯಾರ್ಥಿಗಳು ಮಾನಸಿಕ ನೆಮ್ಮದಿ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಸಮೀಪದ ಹಾರುಗೊಪ್ಪ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸವದತ್ತಿ ತಾಲೂಕುಮಟ್ಟದ ಪ್ರೌಢಶಾಲೆಗಳ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೈಹಿಕ ಸಾಮರ್ಥ್ಯ ಹೆಚ್ಚಿಸುವ ಶಕ್ತಿ ಕ್ರೀಡೆಗಳಿಗಿದ್ದು, ಆಟೋಟಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಮುಖ್ಯ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ವಿಠ್ಠಲ ಸೂರಪ್ಪನವರ ಉದ್ಘಾಟಿಸಿದರು. ವಿಜೇತ ಮಕ್ಕಳಿಗೆ ಪ್ರಶಸ್ತಿಪತ್ರ ಮತ್ತು ಪದಕ ವಿತರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ಸಿ.ತಲ್ಲೂರ, ಶಿವಾನಂದ ಅರಬಾವಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯಶಿಕ್ಷಕ ಎಸ್.ವಿ.ಯರಡ್ಡಿ, ಬಿಇಒ ಎ.ಎ.ಮುಲ್ಲಾ, ಗ್ರಾಪಂ ಅಧ್ಯಕ್ಷೆ ಚನ್ನವ್ವ ಕುಲಗೋಡ, ಸಿ.ಬಿ.ಜಕ್ಕನ್ನವರ, ಶಿವಾನಂದ ನೀಲಪ್ಪನ್ನವರ, ಸಿದ್ದಪ್ಪ ಕುಲಗೂಡ, ವೀರಭದ್ರ ಚಚಡಿ, ವಿಠ್ಠಲ ಕಾಗಿ, ಕೀರಪ್ಪ ಕರೆನ್ನವರ್, ಚಿದಾನಂದ ಪೂಜೇರಿ, ಸವಿತಾ ಬಡ್ಡಿವಡ್ಡರ, ಎಂ.ಬಿ.ಮಾಳಗಿ, ಬಸವರಾಜ ಪಟ್ಟಣ, ಮಹೇಶ ಅಂಗಡಿ, ವಿ.ಎ್. ಮರಿತಮ್ಮನವರ ಹಾಗೂ ಇತರರಿದ್ದರು.