ಕ್ಲಬ್ ಅಧ್ಯಕ್ಷ ಅಲ್ಮಾಸ್ ಅಹ್ಮದ್ 
ಜಿಲ್ಲೆ

ಆಟೋಕ್ರಾಸ್ ರ‍್ಯಾಲಿ ಏ. ೫, ೬ಕ್ಕೆ

ಚಿಕ್ಕಮಗಳೂರು: ಇಲ್ಲಿನ ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ನಿಂದ ಏ.೫ ಮತ್ತು ೬ ರಂದು ಡರ್ಟ್ಫಸ್ಟ್ ಆಟೋಕ್ರಾಸ್ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ರ‍್ಯಾಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಅಲ್ಮಾಸ್ ಅಹ್ಮದ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಯುವಕರು ರಾಜ್ಯ ಮತ್ತು ರಾಷ್ಟçಮಟ್ಟದ ರ‍್ಯಾಲಿಯಲ್ಲಿ ಭಾಗವಹಿಸಲು ಪ್ರೇರಣೆ ನೀಡುವ ಉz್ದೆÃಶದಿಂದ ರ‍್ಯಾಲಿ ಆಯೋಜಿಸುತ್ತಿz್ದÉÃವೆ. ಸ್ಥಳೀಯ ಚಾಲಕರಿಗೂ ಆವಕಾಶ ನೀಡಲಾಗುವುದು. ಬೆಂಗಳೂರು, ಮೈಸೂರು ನಗರ ಸೇರಿದಂತೆ ಕೇರಳ, ಚೆನೈ, ಮಹಾರಾಷ್ಟç ಮತ್ತಿತರೆ ರಾಜ್ಯದಿಂದ ಈಗಾಗಲೆ ೧೦೦ ಕ್ಕೂ ಹೆಚ್ಚು ಮಂದಿ ಸಂಪರ್ಕದಲ್ಲಿದ್ದು ಅವರೆಲ್ಲ ನೊಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದರು.

ನಗರ ಸಮೀಪದ ಬಂಡೀಹಳ್ಳಿ ಮಾರ್ಗದಲ್ಲಿ ಸಿಗುವ ಮಲ್ಲೇಶ್ವರ ದೇವಾಲಯದ ಹತ್ತಿರದಲ್ಲಿ ಇರುವ ಖಾಲಿ ಜಾಗದಲ್ಲಿ ಮೋಟಾರ್ ರ‍್ಯಾಲಿ ಬೆಳಗ್ಗೆ ೯ ರಿಂದ ಸಂಜೆ ೬ ರವರೆಗೆ ನಡೆಯಲಿದೆ ಎಂದು ಹೇಳಿದರು.ರ‍್ಯಾಲಿ ಉದ್ಘಾಟನೆಗೆ ಶಾಸಕ ಎಚ್.ಡಿ.ತಮ್ಮಯ್ಯ ಆಗಮಿಸಲಿದ್ದು, ಶಾಸ್ತ ಗ್ರೂಪ್‌ನ ಶಿವಕುಮಾರ್, ಎಎಸ್ ಫ್ರೂಟ್‌ನ ಸಲ್ಮಾನ್, ಅಜ್ಮತ್ ಷರೀಫ್, ಖಾಲಿ ಜಾಗದ ಮಾಲೀಕ ಜಗದೀಶ್ ಪ್ರಭು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಸಲ್ಮಾನ್‌ಖಾನ್, ಜಗದೀಶ್ ಪ್ರಭು ಇದ್ದರು.