ಜಿಲ್ಲೆ

ಆಟೋ ಪಲ್ಟಿ ಹೊಡೆದು ಚಾಲಕನ ದುರ್ಮರಣ


ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ರಿಂಗ್‌ರೋಡ್‌ನಲ್ಲಿರುವ ಪೀರ್‌ಬಂಗಾಲಿ ದರ್ಗಾ ಹತ್ತಿರ  ರಸ್ತೆ ಡಿವೈಡರ್‌ಗೆ ಆಟೋ  ಡಿಕ್ಕಿ ಹೊಡೆದು ಬಳಿಕ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಮಹ್ಮದ್ ನಬಿಸಾಬ ಮೃತಪಟ್ಟ ಚಾಲಕ.
ಗುರುವಾರ ಮಧ್ಯ ಮನೆಯಿಂದ ಹಾಗರಗಾ ಕ್ರಾಸ್ ಕಡೆಯಿಂದ ಮಹ್ಮದ ರಫಿ ಚೌಕ್ ಕಡೆಗೆ ಹೋಗುವಾಗ ಆಟೋ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆದಾಗ ಅಲ್ಲಿದ್ದ ಕಬ್ಬಿಣದ ಗ್ರೀಲ್ ಚೂಪಾದ ಭಾಗ ಕುತ್ತಿಗೆ ಬಳಿಯಲ್ಲಿ ಚುಚ್ಚಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಸಮೀಪದಲ್ಲಿ ಖಾಸಗಿ ಆಸ್ಪತ್ರೆ ದಾಖಲಿಸಿದಾU ಚಿಕಿತ್ಸೆಗೆ ಸ್ಪಂದಿಸದೆ ತಡರಾತ್ರಿ  ಕೊನೆಯುಸಿರೆಳೆದಿದ್ದಾರೆ ಎಂದು  ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದರು. ಸಂಚಾರ ಠಾಣೆ-೧ರಲ್ಲಿ ಪ್ರಕರಣ ದಾಖಲಾಗಿದೆ.