ಕಲಬುರಗಿ: ನಗರದ ಗಂಗಾನಗರದ ಬಳಿ ಪಾದಚಾರಿ ಮಹಿಳೆಗೆ ಆಟೋದಲ್ಲಿ ಸಾಗಿಸುತ್ತಿದ್ದ ಖುರ್ಚಿಯ ಕಾಲು ಚುಚ್ಚಿ ಕಣ್ಣು ಕಳೆದುಕೊಂಡಿರುವ ಘಟನೆ ನಡೆದಿದೆ. ಗಂಗಾನಗರದ ಭಾಗಮ್ಮ ಸಮಕನವರ ಕಣ್ಣು ಕಳೆದುಕೊಂಡ ಮಹಿಳೆ. ಗಂಗಾನಗರದ ಹನುಮಾನ ದೇವಸ್ಥಾನದ ಸಮೀಪ ನಡೆದುಕೊಂಡು ಹೋಗುತ್ತಿರುವಾಗ ಆಟೋ ದಲ್ಲಿ ಪ್ಲಾಸ್ಟಿಕ್ ಖುರ್ಚಿ ತುಂಬಿಕೊAಡು ಬಂದಿದ್ದು, ಭಾಗಮ್ಮ ಅವರ ಬಲ ಕಣ್ಣಿಗೆ ಖುರ್ಚಿಯ ಕಾಲು ಚುಚ್ಚಿ, ಕಣ್ಣಿನಿಂದ ತೀವ್ರ ರಕ್ತಸ್ರಾವ ಆಗಿದೆ. ಆಸ್ಪತ್ರೆಗೆ ತೋರಿಸಿದ್ದು, ಇನ್ನು ಮುಂದೆ ಕಣ್ಣು ಕಾಣುವುದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಟೋ ಚಾಲಕ ನಾರಾಯಣರಾವ ಬಿ. ವಿರುದ್ಧ ಸಂಚಾರಿ ಠಾಣೆ ೨ರಲ್ಲಿ ಪ್ರಕರಣ ದಾಖಲಾಗಿದೆ.