ಜಿಲ್ಲೆ

ಆಟೊ ಮೀಟರ್‌ಗಳಿಗೆ ಸತ್ಯಾಪನಾ, ಮುದ್ರೆ ಕಡ್ಡಾಯ

ಚಿತ್ರದುರ್ಗ: ಜಿಲ್ಲಾ ವ್ಯಾಪ್ತಿಯಲ್ಲಿ ಆಟೊ ಪ್ರಯಾಣ ದರ ಪರಿಷ್ಕರಣೆಗಾಗಿ, ಸೆಪ್ಟೆಂಬರ್ 15 ರೊಳಗೆ ಆಟೋ ಮೀಟರ್‌ಗಳಿಗೆ ಸತ್ಯಾಪನಾ ಮತ್ತು ಮುದ್ರೆ ಕಡ್ಡಾಯವೆಂದು ಆರ್‌ಟಿಒ ಪ್ರಮುತೇಶ್ ತಿಳಿಸಿದ್ದಾರೆ.
ದರ ಪರಿಷ್ಕರಣೆ ಕುರಿತಂತೆ ಕಳೆದ ಜನವರಿ 23 ರಂದು ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಮೊದಲ 1.5 ಕಿ.ಮೀ.ಗೆ 30 ರೂ., ನಂತರದ ಪ್ರತಿ 1 ಕಿ.ಮೀ. ಮತ್ತು ಭಾಗಶಃಕ್ಕೆ 15 ರೂ., ಕಾಯುವ ದರ ಪ್ರಥಮ 15 ನಿಮಿಷ ಉಚಿತ. ನಂತರದ 15 ನಿಮಿಷ ಅಥವಾ ಭಾಗಶಃ 5 ರೂ.,ಪ್ರಯಾಣಿಕರ ಸರಕು 20 ಕೆ.ಜಿ.ವರೆಗೆ ಉಚಿತ, ನಂತರದ ಪ್ರತಿ 20 ಕೆ.ಜಿ. ಅಥವಾ ಭಾಗಶಃ 5ರೂ.,ರಾತ್ರಿ 10 ರಿಂದ ಬೆಳಗಿನ ಜಾವ 5 ರವರೆಗೆ ಮೀಟರ್‌ನ ಒಂದೂವರೆ ಪಟ್ಟು ದರ ನಿಗದಿಪಡಿಸಲಾಗಿದೆ.
ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಜು.15 ರಿಂದ ಸೆಪ್ಟೆಂಬರ್15 ರೊಳಗೆ ಆಯಾ ಸತ್ಯಾಪನೆ ಮತ್ತು ಮುದ್ರೆ ಮಾಡಿಸುವುದು ಕಡ್ಡಾಯವೆಂದು ಆರ್‌ಟಿಒ ತಿಳಿಸಿದ್ದಾರೆ.