ಜಿಲ್ಲೆ

ಆಜಾದ್ ಅಣ್ಣಿಗೇರಿ ಪಟ್ಟಿ ಕೊಟ್ಟಿದ್ದು ವಿರೋಧ ಪಕ್ಷದವರು- ಕೋಟ

ಸುಭಾಸ ಹೆಗಡೆ ಧೂಪದಹೊಂಡ

ವಿಜಯವಾಣಿ ಸುದ್ದಿಜಾಲ ಕಾರವಾರ ವಕ್ಫ್ ಉಪಾಧ್ಯಕ್ಷ‌ ಸ್ಥಾನಕ್ಕೆ ಆಜಾದ್ ಅಣ್ಣಿಗೇರಿ ಅವರ ಹೆಸರನ್ನು ವಿರೋಧ ಪಕ್ಷದವರು ನೀಡಿದ್ದರು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.‌

ಸುದ್ದಿಗಾರರ ಜತೆ ಮಾತನಾಡಿದ ಅವರು, ವಕ್ಫ್ ಜಿಲ್ಲಾ ಸಲಹಾ ಸಮಿತಿ ನೇಮಕಾತಿ ಅಸಮರ್ಪಕವಾಗಿರುವ ಬಗ್ಗೆ ಗಮನಕ್ಕೆ ಬಂದ ತಕ್ಷಣ ಪಟ್ಟಿಯನ್ನು ತಡೆ ಹಿಡಿಯಲಾಗಿದೆ ಎಂದರು.

ಹೊನ್ನಾವರದ ಯುವಕ‌‌ ಪರೇಶ ಮೇಸ್ತ ಕೊಲೆ‌ ಪ್ರಕರಣಕ್ಕೆ‌ ಸಂಬಂಧಿಸಿದ ಆರೋಪಿ ಆಜಾದ್ ಅಣ್ಣಿಗೇರಿ ಸೇರಿ 6 ಜನ‌ ಉಪಾಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ವಕ್ಫ್ ಮಂಡಳಿ ಆದೇಶ ಹೊರಡಿಸಿತ್ತು. ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು.