ನೊಣವಿನಕೆರೆ : ಸಂಸ್ಕಾರ, ಆಚಾರ ವಿಚಾರಗಳಿಗೆ ಹೆಸರಾದ ದೇಶದಲ್ಲಿ ಅದರಲ್ಲೂ ನಮ್ಮ ರಾಜ್ಯದಲ್ಲಿ ಬಹಳಷ್ಟು ದೇವಸ್ಥಾನಗಳು ಮತ್ತು ಮಠಮಾನ್ಯಗಳು ತನ್ನದೇಯಾದ ಇತಿಹಾಸ ಹೊಂದಿವೆ ಎಂದು ದೊಡ್ಡಮೇಟಿಕುರ್ಕೆ ಬೂದಿಹಾಳ್ ವಿರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಹೇಳಿದರು.
ತಿಪಟೂರು ತಾಲೂಕು ನೊಣವಿನಕೆರೆ ಸೋಮೇಕಟ್ಟೆ ಶ್ರೀಕಾಡಸಿದ್ದೇಶ್ವರ ಸಂಸ್ಥಾನ ಮಠದ ಶ್ರೀ ಕರಿಬಸವ ಸ್ವಾಮೀಜಿ ಅವರ 232ನೇ ವಾರ್ಷಿಕ ಸ್ಮರಣೋತ್ಸವ, ಶ್ರೀಮಠದ 19ನೇ ಗುರುಗಳಾದ ಶ್ರೀಕರಿಬಸವ ದೇಶಿಕೇಂದ್ರ ಸ್ವಾಮೀಜಿ ಅವರ 17ನೇ ವರ್ಷದ ಪುಣ್ಯರಾಧನೆ ಹಾಗೂ ಮೂರುದಿನಗಳ ಜಾತ್ರಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.
ಪಾರಂಪರಿಕವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಯಾವುದೇ ವಿಘ್ನಬರದಂತೆ ಚಾಲನೆ ನೀಡುವುದು ಆಚರಣೆಯಾಗಿದೆ. ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠ ಪೂಜ್ಯರ ಪೂಜಾ ಸಂಕಲ್ಪದಿಂದ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ತನ್ನದೆಯಾದ ಇತಿಹಾಸ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ವರ್ಷದ"ಸದಕಾಲ ಶ್ರೀಮಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಶ್ರೀಮಠ ಬೇಡಿ ಬಂದ ಭಕ್ತರ ಕಷ್ಟ ಸುಖಗಳಿಗೆ ಮಾರ್ಗದರ್ಶನ ಮಾಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದ ಮೊದಲ ದಿನವಾದ ಶುಕ್ರವಾರ ಬೆಳಗ್ಗೆ ಗಂಗಾ, ಗಣಪತಿ ಪೂಜೆ, ಪುನ್ಯಾಹನಾಂದಿ, ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ನಡೆಯಿತು. ಬೆಳಗ್ಗೆ 8ಕ್ಕೆ ಪೀಠಾಧ್ಯಕ್ಷ ಡಾ. ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ತೇವಡಿಹಳ್ಳಿ ಮಠದ ಶ್ರೀಗೋಸಲ ಚನ್ನಬಸವೇಶ್ವರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ 10 ಗಂಟೆಗೆ ಎಸ್.ಕೆ. ಇಂಟರ್ ನ್ಯಾಷನಲ್ ಸ್ಕೂಲ್ ಮಕ್ಕಳಿಂದ ಚಿಣ್ಣರ ಸಂತೆ ಕಾರ್ಯಕ್ರಮ ನಡೆಯಿತು. 11ಕ್ಕೆ ಮಾಗಡಿ ಮಠದ ಶ್ರೀ ಮುಮ್ಮಡಿ ಬಸವರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಲಲಿತಾ ಸಹಸ್ರ ನಾಮ, 108 ಮುತೆದೆಯರಿಗೆ ಬಾಗಿನ ಸೇವೆ, ಸಂಜೆ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಕ್ಕೆ ನಿವೃತ್ತ ಎಸಿಪಿ ಲೋಕೇಶ್ವರ ಚಾಲನೆ ನೀಡಿದರು.
ಹೊನಲು ಬೆಳಕಿನ ಕಬ್ಬಡಿ ಪಂದ್ಯಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸತ ನಿವೃತ್ತ ದೈಹಿಕ ಶಿಕ್ಷಕ ನಂಜೇಗೌಡ ಚಾಲನೆ ನೀಡಿದರು. ಚಿಕ್ಕಮಗಳೂರು ಬೇರುಗುಂಡಿ ಮಠದ ಶ್ರೀ ರೇಣುಕ ಮಹಾಂತ ಸ್ವಾಮೀಜಿ, ಹೆಗ್ಗೆಡೆಹಳ್ಳಿ ಮಠದ ಶ್ರೀಷಡ್ಭಾವರ ಹಿತೇಶ್ವರ ಸ್ವಾಮೀಜಿ, ಕಿರಿಯ ಶ್ರೀಗಳಾದ ಶ್ರೀ ಅಭಿನವ ಕಾಡಸಿದ್ದೇಶ್ವರಸ್ವಾಮೀಜಿ, ಶ್ರೀಮಠದ ರಾಜು ಶಾಸ್ತ್ರೀ, ಕಾಡಸಿದ್ದೇಶ್ವರ ವಿದ್ಯಾ ಸಂಸ್ಥೆ ಶಿಕ್ಷಕರು ಇದ್ದರು